ಧ್ವಜಾರೋಹಣ ದಿನವೇ ತಿರುಪತಿ ದೇವಸ್ಥಾನದಿಂದ ರಾಯರಿಗೆ ಶೇಷವಸ್ತ್ರ ಸಮರ್ಪಣೆ

Sheshavastram
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ‌ಮಠದ ಪೀಠಾಧಿಪತಿ ಶ್ರೀ ಸುವುಧೇಂದ್ರತೀರ್ಥರು ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಿದರು.
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಮಠಕ್ಕೆ ಪ್ರತಿ ವರ್ಷವೂ ತಿರುಪತಿ ತಿರುಮಲ ದೇವಸ್ಥಾನದಿಂದ ಪ್ರಸಾದ ರೂಪದಲ್ಲಿ ಶೇಷವಸ್ತ್ರ ಸಮರ್ಪಣೆ ಮಾಡಲಾಗುತ್ತದೆ. ಆದರೆ ಪ್ರತಿ ವರ್ಷವು ಆರಾಧನೆ ಸಂದರ್ಭದಲ್ಲಿ ಆಗಮಿಸುತಿತ್ತು ಆದರೆ ಈ ಬಾರಿ‌ ಶೇಷ ವಸ್ತ್ರವು ಆರಾಧನೆಗೂ ಮುಂಚೆಯೇ ಸಮರ್ಪಣೆ ಮಾಡಲಾಗಿದೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವದ ಮೊದಲ ದಿನವಾದ ಇಂದು ತಿರುಪತಿ‌ ತಿರುಮಲ ದೇವಸ್ಥಾನದಿಂದ ರಾಯರಿಗೆ ಶೇಷ ವಸ್ತ್ರವನ್ನು ಭಾನುವಾರ ಸಮರ್ಪಣೆ ಮಾಡಲಾಯಿತು. ತಿರುಪತಿ ದೇವಸ್ಥಾನದ ಸಿಇಒ ಶಾಮಲರಾವ್ ಶೆಷವಸ್ತ್ರವನ್ನು ರಾಯರ ಮಠಕ್ಕೆ ತಂದರು. ಸಕಲ ಮಂಗಳ ವಾದ್ಯಗಳೊಂದಿಗೆ ಶೇಷವಸ್ತ್ರವನ್ನು ಸ್ವಾಗತಿಸಲಾಯಿತು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಶಾಮಲರಾವ್ ದಂಪತಿಗೆ ಫಲ ಮಂತ್ರಾಕ್ಷತೆ, ನೀಡಿ, ಅನುಗ್ರಹ ಸಂದೇಶ ನೀಡಿ, ತಿರುಪತಿ ತಿರುಮಲ ದೇವಸ್ಥಾನ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಮಠಕ್ಕೆ ಮೊದಲಿನಿಂದಲೂ ಅವಿನಾಭಾವ ಸಂಬಂದವಿದ್ದು, ಪ್ರತಿವರ್ಷ ಆರಾಧನೆಯ ಸಂದರ್ಭದಲ್ಲಿ ಶೇಷವಸ್ತ್ರವನ್ನು ಸಮರ್ಪಿಸಲಾಗುತ್ತಿತ್ತು ಆದರೆ ಈ ಭಾರಿ ಭಗವಾ ಧ್ವಜಾರೋಹಣ ದಿನವೇ ಶೇಷ ವಸ್ತ್ರ ಸಮರ್ಪಣೆಯಾಗುತ್ತಿರುವುದು ವಿಶೇಷ ಎಂದರು.

ತಿರುಪತಿ ತಿಮ್ಮಪ್ಪನ ಆಶಿರ್ವಾದ ಅಂತರಂಗದ ಭಕ್ತ ಶ್ರೀರಾಘವೇಂದ್ರ ಸ್ವಾಮಿಗಳಿಗೆ ದೊರೆತ ಆಶಿರ್ವಾದವಾಗಿದೆ. ತಿರುಪತಿಯಲ್ಲಿ ಶ್ರೀ ರಾಯರ ಮಠಕ್ಕೆ ನಿವೇಶನ ನೀಡಲಾಗಿದ್ದು, ಮತ್ತೊಂದು ನಿವೇಶನ ನೀಡಲಾಗುತ್ತಿದ್ದು ಅಲ್ಲಿ ಸಭಾಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದರು.

ತಿರುಪತಿ ಮತ್ತು ಮಂತ್ರಾಲಯ ನಡುವೆ ಧಾರ್ಮಿಕ,ಸಂಸ್ಕೃತಿಕ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳುತ್ತಿದ್ದು, ಟಿಟಿಡಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿ ಶಾಮಲರಾವ್ ಇಂದು ಪ್ರಥಮ ಬಾರಿಗೆ ಶೇಷ ವಸ್ತ್ರ ಸಮೇತರಾಗಿ ಆಗಮಿಸಿದ್ದಾರೆ. ಶಾಮಲಾರಾವ್ ದಂಪತಿಗೆ ರಾಯರ ಅನುಗ್ರಹ ಸದಾ ಇರಲಿದೆ ಎಂದು ಅನುಗ್ರಹಿಸಿದರು.

ಶ್ರೀಮಠದ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್, ವೆಂಕಟೇಶ ಜೋಷಿ, ಸಹಾಯಕ ವ್ಯವಸ್ಥಾಪಕ ಐ.ಪಿ ನರಸಿಂಹಾಚಾರ್, ಪ್ರಮುಖರಾದ ವಾದಿರಾಜ ಆಚಾರ್ಯ ಸೇರಿದಂತೆ ಶ್ರೀಮಠದ ಅಧಿಕಾರಿಗಳು, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net