

ರಾಯಚೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಕುತಂತ್ರದಿಂದ ಸಿದ್ದರಾಮಯ್ಯ ಅವರಿಗೆ ತೊಂದರೆಯಾದರೆ ಜನ ಸುಮ್ಮನಿರಲ್ಲ ಎನ್ನುವ ಸಿಎಂ ಹೇಳಿಕೆ ಸರಿಯಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಕೃಷಿ ವಿವಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಹಿರಿಯರಾದ ದೇವೆಗೌಡರು ಸರ್ಕಾರವನ್ನು ತೆಗಿತೀನಿ, ಅಲ್ಲಿವರೆಗೂ ನಿದ್ದೆ ಮಾಡುವುದಿಲ್ಲ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳುತ್ತಿದ್ದು, ದೇವೇಗೌಡರ ಕುಟುಂಬದವರ ಮಾತುಗಳು ಹಾಗೂ ಆಶ್ವಾಸನೆಗಳಿಗೆ ಕರ್ನಾಟಕದಲ್ಲಿ ಬೆಲೆಯಿಲ್ಲ ಎಂದರು.
ಚನ್ನಪಟ್ಟಣದ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬಹಳಷ್ಟು ವರ್ಕೌಟ್ ಮಾಡಿದೆ ಎಂಬ ಸಿ.ಪಿ.ಯೋಗಿಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮೋದಿ, ಅಮಿತ್‌ಶಾ ಹಾಗೂ ಎಚ್.ಡಿ.ಕುಮಾರಸ್ವಾಮಿ ಯಾವ ರೀತಿ ಚುನಾವಣೆ ಮಾಡಿದ್ದಾರೆ ಎಂಬುವುದು ಜನರಿಗೆ ತಿಳಿದಿದೆ. ಮೂರು ಕಡೆಗಳಲ್ಲೂ ಗೆದ್ದು ಬಂದ್ರೂ, ಸೋತ್ರೂ ಸರ್ಕಾರಕ್ಕೆ ಏನು ಆಗುವಂತಹದ್ದಿಲ್ಲ ಎಂದು ಹೇಳಿದರು.