ಚೆಕ್‌ಪೋಸ್ಟ್‌ನಲ್ಲಿ ಹಣ ಪಡೆದು ಆಂಧ್ರದವರನ್ನು ಕರ್ನಾಟಕದೊಳಕ್ಕೆ ಬಿಡುತ್ತಿದ್ದ ಪೇದೆಗಳು!

BRIBE
Published on

ರಾಯಚೂರು: ಇಬ್ಬರು ಪೊಲೀಸ್ ಪೇದೆಗಳು ತಾಲೂಕಿನ ಗಿಲ್ಲೆಸುಗೂರಿನ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ನಿಯಮ ಪಾಲಿಸದೆ ಆಂಧ್ರದಿಂದ ಬಂದವರ ಬಳಿ ಹಣ ಪಡೆದು, ರಾಜ್ಯದೊಳಕ್ಕೆ ಬಿಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ಇಡಪನೂರು ಠಾಣೆಯ ಪೇದೆಗಳಾದ ಅಮರಗುಂಡಪ್ಪ ಮತ್ತು ರಾಜಪ್ಪ ಅವರ ಹಣದಾಹದಿಂದಾಗಿ ಆಂಧ್ರದವರು ನಿರಾತಂಕವಾಗಿ ಜಿಲ್ಲೆಗೆ ಪ್ರವೇಶ ಪಡೆಯುವಂತಾಗಿತ್ತು. ಅವರಲ್ಲಿ ಯಾರಾದರೂ ಕರೊನಾ ಸೋಂಕಿತರಿದ್ದರೆ ಜಿಲ್ಲೆಯ ಜನರು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು.

ವಿಷಯ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಅವರು ಆ ಇಬ್ಬರನ್ನೂ ಶುಕ್ರವಾರ ಅಮಾನತು ಮಾಡಿದ್ದಾರೆ. ಇವರಿಗೆ ಸಹಕರಿಸುತ್ತಿದ್ದ ಗೃಹ ರಕ್ಷಕ ದಳದ ನೌಕರ ಬೂಷಪ್ಪ ಎಂಬಾತನನ್ನು ಮಾತೃ ಇಲಾಖೆಗೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net