ಇಲ್ಲಿಯವರೆಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ್ ಅಧಿಕಾರವಧಿಯಲ್ಲಿ ಪಾಲಿಕೆಯಲ್ಲಿ ಯಥೇಚ್ಚವಾಗಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಪಾಲಿಕೆಯಲ್ಲಿ ಕಡತ ವಿಲೇವಾರಿಗೆ ಸತಃ ಆಯುಕ್ತರ ಕಚೇರಿಯಿಂದಲೆ ಹಣದ ಬೇಡಿಕೆ ಇಡಲಾಗುತ್ತಿದೆ ಎಂಬುದಾಗಿ ಸಾರ್ವಜನಿರು ಆರೋಪಿಸಿದ್ದೂ ಇದೆ. ಸ್ವತ: ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮಧ್ಯವರ್ತಿಯೋರ್ವರ ಕೈಯಲ್ಲಿ ಲಕ್ಷಾಂತರ ರೂ. ಹಣ ಇರುವುದನ್ನು ಪತ್ತೆಹಚ್ಚಲಾಗಿತ್ತು. ಪ್ರಸ್ತುತ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹುದ್ದೆ ನಿಯುಕ್ತಿಗೊಳಿಸಿಲ್ಲ. ಅವರ ಸ್ಥಾನಕ್ಕೆ ರಾಹುಲ್ ರತ್ನಂ ಪಾಂಡೆ ಅವರನ್ನು ಮುಂದಿನ ಆದೇಶದವರೆಗೆ ಪಾಲಿಕೆಯ ಆಯುಕ್ತರನ್ನಾಗಿ ನೇಮಕಗೊಳಿಸಿ ಪೋಸ್ಟಿಂಗ್ ನೀಡಲಾಗಿದೆ.