ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ ಇಟಲಿಗೆ ತೆರಳಿದ್ದೇಕೆ?

rahulgandhi
Published on

ನವದೆಹಲಿ: ರೈತರ ಪ್ರತಿಭಟನೆ ಕುರಿತು ಕೇಂದ್ರದ ವಿರುದ್ಧ ಇತ್ತೀಚೆಗೆ ತೀವ್ರ ವಾಗ್ದಾಳಿ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ.

ಕತಾರ್ ಏರ್​ಲೈನ್ಸ್ ಮೂಲಕ ಇಟಲಿಯ ಮಿಲಾನ್​ಗೆ ತೆರಳಿರುವ ಅವರು, ಹೊಸ ವರ್ಷಾಚರಣೆಗಾಗಿ ಹೋಗಿದ್ದಾರೆ ಎನ್ನಲಾಗಿದೆ. ಮತ್ತೆ ಕೆಲ ವರದಿಗಳ ಪ್ರಕಾರ, ಪಕ್ಷದ ಅಧ್ಯಕ್ಷರಾಗಲು ಇಷ್ಟವಿಲ್ಲದೆ ಇಟಲಿಗೆ ತೆರಳಿದ್ದಾರೆ.

ಕಾಂಗ್ರೆಸ್ ಸಾಂಸ್ಥಿಕ ಚುನಾವಣಾ ಸೇರಿ ಹೊಸ ಸಾರಥಿಯನ್ನು ಅಯ್ಕೆ ಮಾಡಲು ತಯಾರಿ ನಡೆಯುತ್ತಿರುವುದರಿಂದ ರಾಹುಲ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲ, ರಾಹುಲ್ ವೈಯಕ್ತಿಕ ಕಾರಣಕ್ಕಾಗಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net