ಜುಬೀನ್ ಗಾರ್ಗ್ ಸಮಾಧಿಗೆ ಭೇಟಿ ನೀಡಿದ ರಾಹುಲ್ ಗಾಂಧಿ: ಕುಟುಂಬಸ್ಥರಿಗೆ ಸಾಂತ್ವನ; ಪಾರದರ್ಶಕ ತನಿಖೆ ಒತ್ತಾಯ| Rahul Gandhi

ವಿಜಯವಾಣಿ (58)
Published on

Guwahati: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಇಂದು(ಅ. 17) ಅಸ್ಸಾಂನ ಗುವಾಹಟಿಯಲ್ಲಿರುವ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಬಳಿಕ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಸೆ. 19ರಂದು ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪುರಕ್ಕೆ ತೆರಳಿದ್ದ ಜುಬೀನ್ ಗಾರ್ಗ್​ ಅಲ್ಲಿನ  ಸಮುದ್ರದಲ್ಲಿ ಈಜುತ್ತಿದ್ದಾಗ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದರು. ಆದರೆ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಅಸ್ಸಾಂ ಸರ್ಕಾರ ಎಸ್​ಐಟಿ ರಚಿಸಿ ಈ ಬಗ್ಗೆ ತನಿಖೆ ನಡೆಸುತ್ತಿದೆ.

ಜುಬೀನ್ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ನಾನು ಜುಬೀನ್ ಅವರ ಕುಟುಂಬದೊಂದಿಗೆ ಮಾತನಾಡಿದೆ. ಅವರು ಒಂದೇ ಒಂದು ಮಾತನ್ನು ಹೇಳಿದರು. ನಾವು ನಮ್ಮ ಜುಬೀನ್‌ನನ್ನು ಕಳೆದುಕೊಂಡಿದ್ದೇವೆ. ನಮಗೆ ಬೇಕಾಗಿರುವುದು ಒಂದೇ ಅದೇ ಸತ್ಯ ಸ್ಪಷ್ಟವಾಗಬೇಕು ಎಂದಿದ್ದಾರೆ. ಇಡೀ ಅಸ್ಸಾಂ ಈ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದೆ. ಘಟನೆಯ ಬಗ್ಗೆ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ತನಿಖೆ ಸತ್ಯ ಏನೆಂಬುದನ್ನು ತಿಳಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

17ನೇ ವಯಸ್ಸಿನಲ್ಲಿ ಇದ್ದಾಗ ನಾನು ಸಿಕ್ಕಿಂನಲ್ಲಿ ಪರ್ವತಾರೋಹಣ ಕೋರ್ಸ್ ಮಾಡುತ್ತಿದ್ದೆ. ಆಗ ಪ್ರತಿದಿನ ಮೌಂಟ್ ಕಾಂಚನಜುಂಗಾವನ್ನು ನೋಡುತ್ತಿದ್ದೆ. ಅದು ಪ್ರಾಮಾಣಿಕ, ಪಾರದರ್ಶಕ, ಅಚಲ ಹಾಗೂ ಸುಂದರವಾಗಿದೆ. ಇಂದು ನಾನು ಬರುತ್ತಿರುವಾಗ ಗೌರವ್, ಜುಬೀನ್ ಜಿ ಅವರು ಕಾಂಚನಜುಂಗಾ ಎಂದು ಹೇಳಿದರು. ನಿಜವಾಗಿಯೂ ಜುಬೀನ್ ಜಿ ಕಾಂಚನಜುಂಗಾ ಆಗಿದ್ದರು ಎಂದು ತಿಳಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net