'ಸೋಲು, ಗೆಲುವು ಇದ್ದಿದ್ದೇ..' ಸ್ಮೃತಿ ಇರಾನಿಯನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ!

rahul
Published on

ನವದೆಹಲಿ: ಸೋಲು-ಗೆಲುವು ಜೀವನದ ಒಂದು ಭಾಗವಾಗಿದ್ದು, ಇತರರನ್ನು ಅವಮಾನಿಸುವುದು ದೌರ್ಬಲ್ಯದ ಸಂಕೇತ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರ ವಿರುದ್ಧ ಕೆಲವರು ಮಾಡುತ್ತಿರುವ ಟೀಕೆಗಳನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಾಕಿರುವ ರಾಹುಲ್​, ಬಿಜೆಪಿಯ ಸ್ಮೃತಿ ಇರಾನಿಯನ್ನು ಸಮರ್ಥಿಸಿಕೊಂಡರು. ಅವರ ಬಗ್ಗೆ "ಅಸಭ್ಯವಾಗಿ ವರ್ತಿಸುವುದನ್ನು ನಿಲ್ಲಿಸಿ" ಎಂದು ಜನರನ್ನು ಕೇಳಿಕೊಂಡಿದ್ದಾರೆ.

ಜೀವನದಲ್ಲಿ ಸೋಲುಗಳು ಇದ್ದೇ ಇರುತ್ತವೆ. ಸ್ಮೃತಿ ಇರಾನಿ ಅಥವಾ ಇತರ ಯಾವುದೇ ನಾಯಕರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸುವುದನ್ನು ತಪ್ಪಿಸಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಒಬ್ಬರನ್ನು ಅವಮಾನಿಸುವುದು ಶಕ್ತಿಯಲ್ಲ ಎಂದಿದ್ದಾರೆ.

ಕಾಂಗ್ರೆಸ್ ನ ಕಿಶೋರಿ ಲಾಲ್ ಶರ್ಮಾ ವಿರುದ್ಧ ಅಮೇಥಿಯಲ್ಲಿ 1.4 ಲಕ್ಷ ಮತಗಳ ಅಂತರದಿಂದ ಸೋತರು. 2019 ರ ಲೋಕಸಭೆ ಚುನಾವಣೆಯಲ್ಲಿ ಇರಾನಿ ಅವರು ರಾಹುಲ್​ ಗಾಂಧಿಯನ್ನು ಸೋಲಿಸಿದಾಗ, ಅವರನ್ನು 'ದೈತ್ಯ ಹೋರಾಟಗಾರ್ತಿ' ಎಂದು ಬಣ್ಣಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net