ಅಂಬಾನಿಯಂತಹ ಕೈಗಾರಿಕೋದ್ಯಮಿಗಳಿಗೆ ನೆರವಾಗಲು ಮೋದಿಯವರನ್ನು ‘ದೇವರೇ ಕಳಿಸಿದ್ದಾರೆ’: ರಾಹುಲ್ ಗಾಂಧಿ

modi
Published on

ನವದೆಹಲಿ: ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡಲು ನರೇಂದ್ರ ಮೋದಿ ಅವರನ್ನು ದೇವರೇ ಕಳುಹಿಸಲಾಗಿದೆಯೇ ಹೊರತು ಬಡವರಿಗೆ ನೆರವಾಗಲು ಕಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್​ ನಾಯಕ ಟಾಂಗ್ ಕೊಟ್ಟಿದ್ದಾರೆ.

ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟದ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ದೇಶದ ಆರ್ಥಿಕತೆಯನ್ನು ಪುನಾರಂಭ ಮಾಡಲಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.

ಇತ್ತೀಚೆಗೆ ಎರಡು ಮಾಧ್ಯಮ ಸಂದರ್ಶನಗಳಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇವರು ತಮ್ಮನ್ನು ಒಂದು ಉದ್ದೇಶದಿಂದ ಆಯ್ಕೆ ಮಾಡಿದ್ದಾನೆ. ಆ ಗುರಿ ಪೂರ್ಣಗೊಳ್ಳುವವರೆಗೂ ತಾವು ಕೆಲಸ ಮುಂದುವರಿಸುವುದಾಗಿ. ಹಾಗೂ ತಮ್ಮ ಮೇಲೆ ನಂಬಿಕೆ ಇರಿಸಿರುವವರ ಸೇವೆ ಸಲ್ಲಿಸುವುದು ತಮ್ಮ ಕರ್ತವ್ಯ ಎಂದು ಹೇಳಿದ್ದರು.

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ದೈವಿಕ ಪ್ರೇರಣೆಯ ಕಥೆಗಳನ್ನು ಈಗ ಏಕೆ ಕಟ್ಟುತ್ತಿದ್ದಾರೆ ಎಂದು ಪ್ರಶ್ನಿಸಿರುವ ರಾಹುಲ್​, ಬಹುಶಃ ಚುನಾವಣೆ ಬಳಿಕ ಅದಾನಿ ಜೊತೆಗಿನ ನಂಟಿನ ಕುರಿತಾಗಿ ಇಡಿ ಪ್ರಶ್ನೆ ಮಾಡಲಿದೆ. ಆ ವೇಳೆ ಪ್ರಧಾನಿ ಮೋದಿ ಅವರು ಇವೆಲ್ಲವೂ ದೈವಿಕ ಕಾರ್ಯ ಎಂದು ಹೇಳುತ್ತಾರಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಮೋದಿ ಅವರು ಈ ಎಲ್ಲಾ ವಿಚಾರಗಳ ಕುರಿತಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗದ ಬಗ್ಗೆ ಮಾತನಾಡಬೇಕು. ಸಮಾಜವನ್ನು ವಿಭಜಿಸುವ ಉದ್ದುದ್ದ ಭಾಷಣ ಮಾಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದಾನಿಯಂತಹ ಶ್ರೀಮಂತರ ಉದ್ಧಾರಕ್ಕೆ ದೇವರು ಮೋದಿ ಅವರನ್ನು ಕಳುಹಿಸಿದ್ದಾರೆ ಹೊರೆತು ರೈತರು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ದೇವರು' ಮೋದಿ ಅವರನ್ನು ಕಳುಹಿಸಿಲ್ಲ" ಎಂದು ರಾಹುಲ್ ಗಾಂಧಿ ಟೀಕಿಸಿದರು.

ದೇಶದಲ್ಲಿ ಇರುವ ಶೇ. 50 ರಷ್ಟು ಮೀಸಲಾತಿ ಮಿತಿಯನ್ನು ಇಂಡಿಯಾ ಮೈತ್ರಿ ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ತೆಗೆದು ಹಾಕಲಾಗುವುದು. ದೇಶದ ಸಂವಿಧಾನವನ್ನು ತಮ್ಮ ಮೈತ್ರಿ ಕೂಟರಕ್ಷಣೆ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net