ರಾತ್ರೋರಾತ್ರಿ ಮೆಕ್ಯಾನಿಕ್ ಆದ ರಾಹುಲ್ ಗಾಂಧಿ!: ಫೋಟೋ ನೋಡಿ...

Rahul Gandhi
Published on

ನವದೆಹಲಿ: ಕಾಂಗ್ರೆಸ್​ನ ನಾಯಕ ರಾಹುಲ್ ಗಾಂಧಿ, ಅಂಗಡಿಯೊಂದರಲ್ಲಿ ಮೆಕ್ಯಾನಿಕ್‌ಗಳೊಂದಿಗೆ ನೆಲದ ಮೇಲೆ ಕುಳಿತು ಬೈಕ್ ಅನ್ನು ಸರಿಪಡಿಸುತ್ತಿರುವ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ದೆಹಲಿಯ ಕರೋಲ್​ಬಾಗ್​ನಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್​ಗಳ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು, ಅವರೊಂದಿಗೆ ಮಾತುಕತೆ ನಡೆಸಿ ಬೈಕ್​ ಫಿಕ್ಸ್​ ಮಾಡುವುದು ಹೇಗೆ ಎಂಬುದನ್ನು ಕಲಿತಿದ್ದಾರೆ.

ಕಾಂಗ್ರೆಸ್,​ ರಾಹುಲ್ ಅವರ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಕೈಗಳು ಭಾರತವನ್ನು ನಿರ್ಮಿಸುತ್ತವೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಬಟ್ಟೆಗಳ ಮೇಲಿನ ಗ್ರೀಸ್​ ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನ. ಅವರನ್ನು ಹುರಿದುಂಬಿಸುವ ಕೆಲಸವನ್ನು ಒಬ್ಬ ಸಾರ್ವಜನಿಕ ನಾಯಕ ಮಾತ್ರ ಮಾಡಬಲ್ಲ ಎಂದು ಬರೆಯಲಾಗಿದೆ.

ದ್ವಿಚಕ್ರ ವಾಹನವನ್ನು ಸರಿಪಡಿಸಲು ಸ್ಕ್ರೂಡ್ರೈವರ್ ಕೈಗೆತ್ತಿಕೊಂಡ ಅವರು ವ್ಯಾಪಾರಿಗಳು ಮತ್ತು ಬೈಕ್ ಮೆಕಾನಿಕ್‌ಗಳೊಂದಿಗೆ ಮಾತನಾಡುತ್ತಿರುವುದನ್ನು  ನೋಡ ಬಹುದಾಗಿದೆ.

ರಾಹುಲ್ ಗಾಂಧಿ ಸ್ಥಳೀಯರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮೇ 23 ರಂದು ಟ್ರಕ್​ನಲ್ಲಿ ಚಲಿಸಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಅವರು ಈ ಹಿಂದೆ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಜತೆ ಸ್ಕೂಟರ್​ನಲ್ಲಿ ಕುಳಿತಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net