ಚುನಾವಣೆಯಲ್ಲಿ ಬಡವರ ಶಕ್ತಿ ಗೆದ್ದಿದೆ, ಇದು ಜನತೆಗೆ ಸಂದ ಜಯ : ರಾಹುಲ್ ಗಾಂಧಿ

rahul gandhi
Published on

ದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಬಹುತೇಕ ಮುನ್ನಡೆಯನ್ನು ಸಾಧಿಸಿದ್ದು, ಕಾಂಗ್ರೆಸ್‌ನ ರಾಹುಲ್ ಗಾಂಧಿ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ, "ದ್ವೇಷದ ಮಾರುಕಟ್ಟೆ ಮುಚ್ಚಿವೆ, ಪ್ರೀತಿಯ ಅಂಗಡಿಗಳು ತೆರೆದಿವೆ" ಎಂದು ಹೇಳಿದ್ದಾರೆ.

ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಚುನಾವಣೆಯಲ್ಲಿ ಬಡವರ ಶಕ್ತಿ ಗೆದ್ದಿದ್ದು, ಇತರ ರಾಜ್ಯಗಳಲ್ಲಿಯೂ ಇದು ಪುನರಾವರ್ತನೆಯಾಗುತ್ತದೆ. ಕಾಂಗ್ರೆಸ್ ಬಡವರ ಸಮಸ್ಯೆಗಳಿಗಾಗಿ ಹೋರಾಡಿದೆ ಮತ್ತು ನಮ್ಮ ಸರ್ಕಾರದ ದಲ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕಕ್ಕೆ ನೀಡಿರುವ ಐದು ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ನಾವು ದ್ವೇಷದಿಂದ ಈ ಚುನಾವಣೆಯನ್ನು ಎದುರಿಸಿಲ್ಲ. ಬದಲಾಗಿ ಪ್ರೀತಿ ಮತ್ತು ಸಹೋದರತ್ವದಿಂದ ಹೋರಾಡಿ ಗೆದ್ದಿದ್ದೇವೆ. ನಾನು ಕರ್ನಾಟಕದ ಜನರಿಗೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net