

ನವದೆಹಲಿ: ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸೋನಿಯಾ ಗಾಂಧಿಯವರೇ ಮಧ್ಯಂತರ ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ. ಅವರ ಅವಧಿ ಆಗಸ್ಟ್ನಲ್ಲಿ ಮುಕ್ತಾಯವಾಗಲಿದ್ದು, ಈಗಾಗಲೇ ಪಕ್ಷದ ಹಲವು ನಾಯಕರು ಮತ್ತೊಮ್ಮೆ ರಾಹುಲ್ ಗಾಂಧಿಯೇ ಅಧ್ಯಕ್ಷರಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದೀಗ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ.
ಪಕ್ಷಕ್ಕೆ ಶೀಘ್ರವಾಗಿ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಬೇಕು. ಕಾಂಗ್ರೆಸ್ ಸಿದ್ಧಾಂತ ರಹಿತ, ನೆಲೆಯಿಲ್ಲದ ಪಕ್ಷ. ಅಸಮರ್ಥ ಪ್ರತಿಪಕ್ಷ ಎಂದೇ ಅನೇಕರು ಗ್ರಹಿಸುತ್ತಿದ್ದಾರೆ. ಮಾಧ್ಯಮಗಳೂ ಇದೇ ಆಯಾಮದಲ್ಲಿ ಸುದ್ದಿ, ವಿಶ್ಲೇಷಣೆಗಳು ಬಿತ್ತರವಾಗುತ್ತಿವೆ. ಪಕ್ಷ ಇದರಿಂದ ಹೊರಬರಬೇಕು, ಜನರಲ್ಲಿ ನಂಬಿಕೆ ಹುಟ್ಟಿಸಬೇಕು ಎಂದರೆ ಕೂಡಲೇ ಪೂರ್ಣಾವಧಿಯ ಅಧ್ಯಕ್ಷನ ನೇಮಕವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ಖಂಡಿತ ಪಕ್ಷವನ್ನು ಮುನ್ನಡೆಸುವ ಕೆಚ್ಚು, ಸಾಮರ್ಥ್ಯ ಇದೆ. ಹಾಗಾಗಿ ಮತ್ತೊಮ್ಮೆ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಏರಲು ಒಲವು ತೋರಿಸಬೇಕು ಎಂದು ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೀಗ ಮತ್ತೊಮ್ಮೆ ಸೋನಿಯಾ ಗಾಂಧಿಯವರೇ ಮಧ್ಯಂತರ ಅವಧಿಗೆ ಪಕ್ಷದ ಅಧ್ಯಕ್ಷೆಯಾಗಬೇಕು. ಎಲ್ಲ ಹೊರೆ ಹೊರಬೇಕು ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದ ಮೇಲ್ಛಾವಣಿ; ಓರ್ವ ಬಾಲಕ ಸಾವು, ಮೂವರಿಗೆ ಗಂಭೀರ ಗಾಯ
ಈ ಬಾರಿ ರಾಹುಲ್ ಗಾಂಧಿಯವರೇನಾದರೂ ಅಧ್ಯಕ್ಷನಾಗಲು ಒಪ್ಪದೆ ಇದ್ದರೆ, ಬೇರೆ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್ ಗಂಭೀರವಾಗಿ ಯೋಚಿಸಬೇಕು ಮತ್ತು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿಯವರು ಕಳೆದ ಲೋಸಕಭಾ ಚುನಾವಣೆಯ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ನಂತರ ಸೋನಿಯಾ ಗಾಂಧಿಯವರು ಅನಿರ್ಧಿಷ್ಟಾವಧಿಗೆ ಅಧ್ಯಕ್ಷೆಯಾಗಿದ್ದರು. ನಾಳೆ ಆಗಸ್ಟ್ 10ರಂದು ಈ ಅವಧಿ ಮುಕ್ತಾಯಗೊಳ್ಳಲಾಗಿದೆ. (ಏಜೆನ್ಸೀಸ್)