ರಾಹುಲ್ ಗಾಂಧಿಗೆ ಲೆಕ್ಕ ಗೊತ್ತಿಲ್ಲ.. ಖುಷ್ಬು ಲೇವಡಿ

rahul
Published on

ಚೆನ್ನೈ: ಕಾಂಗ್ರೆಸ್ ಪಕ್ಷಕ್ಕೆ ಸೊಕ್ಕು ಬಂದಿದೆ. ರಾಹುಲ್ ಗಾಂಧಿ ಅವರಿಗೆ ಗಣಿತ ಕಲಿಸುವ ಅಗತ್ಯವಿದೆ ಎಂದು ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಟೀಕಿಸಿದ್ದಾರೆ.

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಖುಷ್ಬೂ ತಮ್ಮ ಎಕ್ಸ್ ಪೇಜ್ ನಲ್ಲಿ ಬರೆದುಕೊಂಡಿದ್ದು, `ರಾಹುಲ್ ಗಾಂಧಿಗೆ ಯಾರಾದರೂ ಗಣಿತ ಕಲಿಸಬೇಕು. ಅವರು ಸಂಸತ್ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿರುವುದೇ ದೊಡ್ಡ ಸಾಧನೆ ಹಾಗೂ ವಿಶೇಷವೆಂದು ಪರಿಗಣಿಸುತ್ತಾರೆ. ಅವರು 543 ರಲ್ಲಿ 99 ಪಡೆದಿರುವುದನ್ನು ಮರೆತಿದ್ದಾರೆ. ಅಷ್ಟೇ ಅಲ್ಲ ಈ ದೇಶದ ಬಹುಸಂಖ್ಯಾತ ಜನರ ನಂಬಿಕೆಯನ್ನು ರಾಹುಲ್​ ಅವಮಾನಿಸುತ್ತಾರೆ. ಹಿಂದೂಗಳ ನಂಬಿಕೆಯು ಹಿಂಸಾತ್ಮಕವಾಗಿದೆ ಎಂದು ಆರೋಪಿಸುತ್ತಾರೆ. 100ಕ್ಕೆ 99 ಅಲ್ಲ.. 543ರಲ್ಲಿ 99ರಲ್ಲಿ ಗೆದ್ದಿದ್ದೀವಿ ಎಂಬುದನ್ನು ಅರಿತಂತಿಲ್ಲ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದನ್ನು ಕಂಡು ರಾಹುತ್​ ಎಷ್ಟು ಅಪಕ್ವ ಮತ್ತು ಹತಾಶೆಗೊಂಡಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ದುರಹಂಕಾರಿ. ಮತ್ತು ರಾಹುಲ್ ಗಾಂಧಿ ಶಾಂತಿಯುತ ಸಮಾಜದಲ್ಲಿ ಭಿನ್ನಾಭಿಪ್ರಾಯ ಮತ್ತು ಪ್ರಕ್ಷುಬ್ಧತೆಯನ್ನು ಸೃಷ್ಟಿಸುತ್ತಿದ್ದಾರೆ. ಇಂತಹ ಚಟುವಟಿಕೆಗಳಿಂದ ಅವರ ನಿಜ ಮುಖ ಶೀಘ್ರದಲ್ಲೇ ಬಯಲಾಗಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net