ಹಿಂಸಾಚಾರದಿಂದ ಯಾರಿಗೂ ಪ್ರಯೋಜನ ಇಲ್ಲ: ರಾಹುಲ್​ ಗಾಂಧಿ

rahul 4 mar 20
Published on

ನವದೆಹಲಿ: ಹಿಂಸಾಚಾರದಲ್ಲಿ ನಲುಗಿದ ಈಶಾನ್ಯ ದೆಹಲಿಯ ಬ್ರಿಜ್​ಪುರಿಯ ಶಾಲೆಗೆ ಸಂಸದ ರಾಹುಲ್​ ಗಾಂಧಿ ನೇತೃತ್ವದ ಕಾಂಗ್ರೆಸ್​ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬೆಂಕಿಗೆ ಆಹುತಿಯಾದ ಈ ಶಾಲೆಯಲ್ಲಿ ದೇಶದ ಭವಿಷ್ಯ ಅಡಗಿತ್ತು. ದ್ವೇಷ ಮತ್ತು ಹಿಂಸಾಚಾರ ಭವಿಷ್ಯವನ್ನು ನಾಶ ಮಾಡಿದೆ. ಅಲ್ಲದೆ ನಮ್ಮ ಭವಿಷ್ಯವನ್ನು ಇಲ್ಲಿ ಸುಟ್ಟು ಹಾಕಲಾಗಿದೆ ಎಂದು ಶಾಲೆಯ ಭೇಟಿ ನಂತರ ರಾಹುಲ್​ ಗಾಂಧಿ ಹೇಳಿದರು.

ದೆಹಲಿ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ ಸ್ಪೀಕರ್​ ಹೋಳಿ ಹಬ್ಬದ ನಂತರ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಚರ್ಚೆ ವೇಳೆ ಹಿಂಸಾಚಾರಕ್ಕೆ ನಲುಗಿದ ದೆಹಲಿ ಮಾಹಿತಿಯನ್ನು ಬಿಚ್ಚಿಡಲಾಗುವುದು ಎಂದು ಹೇಳಿದರು.

ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಭಾರತ ಮಾತೆಗೆ ಹಾನಿಯಾಗುತ್ತದೆ. ಹಿಂಸಾಚಾರ ಹಾಗೂ ದ್ವೇಷದ ಮೂಲಕ ರಾಷ್ಟ್ರವನ್ನು ವಿಭಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 46 ಮಂದಿ ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಲಭೆಯಿಂದ ಹಲವು ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net