

ತಿರುವನಂತಪುರಂ: ಕೇರಳದಲ್ಲಿ ಚುನಾವಣೆಯ ಬಿಸಿ ಹೆಚ್ಚಾಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾಥಾಶ್ರಮದ ಮಕ್ಕಳೊಂದಿಗೆ ಈಸ್ಟರ್ ಹಬ್ಬವನ್ನು ಆಚರಿಸಿದ್ದಾರೆ. ಬಾಡೂಟ ಸವಿಯುತ್ತ, ಮಕ್ಕಳಿಗೆ ಸಹೋದರ ಪ್ರಿಯಾಂಕಾರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ವಯನಾಡ್ನ ಜೀವನ ಜ್ಯೋತಿ ಅನಾಥಾಶ್ರಮದಲ್ಲಿ ಈಸ್ಟರ್ ಆಚರಣೆಗೆ ಏರ್ಪಾಡು ಮಾಡಲಾಗಿತ್ತು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಪ್ರಿಯಾಂಕಾ ಅವರ ಪತಿಗೆ ಕರೊನಾ ದೃಢವಾಗಿರುವ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಆ ಕಾರಣ ಕಾರ್ಯಕ್ರಮಕ್ಕೆ ಬರಲಾಗಿಲ್ಲ ಎಂದು ವಿಡಿಯೋ ಸಂದೇಶವನ್ನು ಅವರು ಹರಿಬಿಟ್ಟಿದ್ದಾರೆ.
ಜೀವನಜ್ಯೋತಿ ಅನಾಥಾಶ್ರಮದ ಮಕ್ಕಳೊಂದಿಗೆ ರಾಹುಲ್ ಗಾಂಧಿ ಈಸ್ಟರ್ ಆಚರಿಸಿದ್ದಾರೆ. ಹಬ್ಬದ ಪ್ರಯುಕ್ತ ವಿಶೇಷ ಔತಣಕೂಟವನ್ನು ಆಯೋಜಿಸಲಾಗಿತ್ತು. ಚಿಕನ್, ಮೊಟ್ಟೆ ಹೀಗೆ ನಾನಾ ಬಗೆಯ ಊಟವನ್ನು ರಾಹುಲ್ ಮಕ್ಕಳೊಂದಿಗೆ ಕುಳಿತು ಸವಿದಿದ್ದಾರೆ. ಈ ಸಮಯದಲ್ಲಿ ಪ್ರಿಯಾಂಕಾ ಅವರಿಗೂ ವಿಡಿಯೋ ಕಾಲ್ ಮಾಡಿದ್ದಾರೆ. ಮಕ್ಕಳೊಂದಿಗೆ ಅವರನ್ನು ಮಾತನಾಡಿಸಿದ್ದಾರೆ. (ಏಜೆನ್ಸೀಸ್)