ಯೆಸ್​ ಬ್ಯಾಂಕ್​ ಆರ್ಥಿಕ ಬಿಕ್ಕಟ್ಟು: ಪ್ರಧಾನಿ ಮೋದಿ ವಿರುದ್ಧ ರಾಹುಲ್​, ಚಿದಂಬರಂ ಕಿಡಿ

PM Modi rahul
Published on

ನವದೆಹಲಿ: ಯೆಸ್​ ಬ್ಯಾಂಕ್​ ಆರ್ಥಿಕ ಬಿಕ್ಕಟ್ಟು ಬೆನ್ನಲ್ಲೇ ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಹಾಗೂ ಪಿ. ಚಿದಂಬರಂ ಟ್ವೀಟ್​ ಮೂಲಕ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಮೋದಿ ಹಾಗೂ ಅವರ ಯೋಜನೆಗಳಿಂದಲೇ ಭಾರತೀಯ ಆರ್ಥಿಕತೆ ನಾಶವಾಗುತ್ತಿದೆ ಎಂದು ರಾಹುಲ್​ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

ಚಿದಂಬರಂ ಟ್ವೀಟ್​ ಮಾಡಿ, ಬಿಜೆಪಿ 6 ವರ್ಷಗಳಿಂದ ದೇಶದಲ್ಲಿ ಅಧಿಕಾರದಲ್ಲಿದೆ. ಆಡಳಿತ ಮತ್ತು ಹಣಕಾಸು ಸಂಸ್ಥೆಗಳ ನಿಯಂತ್ರಣದಲ್ಲಿ ಅವರ ನಡೆ ಏನೆಂದು ಬಹಿರಂಗವಾಗಿದೆ. ಈ ಮೊದಲು ಪಂಜಾಬ್​ ಆ್ಯಂಡ್​ ಮಹಾರಾಷ್ಟ್ರ ಕೋ ಆಪರೇಟಿವ್​ ಬ್ಯಾಂಕ್(ಪಿಎಂಸಿ)​, ಇದೀಗ ಯೆಸ್​ ಬ್ಯಾಂಕ್​ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ. ಇವುಗಳ ಬಗ್ಗೆ ಸರ್ಕಾರಕ್ಕೇ ಏನಾದರೂ ಕಾಳಜಿ ಇದೆಯೇ? ತನ್ನ ಜವಾಬ್ದಾರಿಯಿಂದ ಸರ್ಕಾರ ಜಾರಿಕೊಳ್ಳಲು ಸಾಧ್ಯವೇ? ತನ್ನ ಹಾದಿಯಲ್ಲಿ ಮೂರನೇ ಬ್ಯಾಂಕ್​ ಕೂಡ ಇದೆಯಾ? ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಸ್ಥಿ ಸಾಲಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯೆಸ್​ ಬ್ಯಾಂಕ್​ ಅನ್ನು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್​ ಆಡಳಿತ ಮಂಡಳಿಯನ್ನು ಸೂಪರ್​ ಸೀಡ್​ ಆಗಿ ಮಾಡಿದೆ. ಅಲ್ಲದೆ, ನಗದು ವಿತ್​ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಇದರಿಂದ ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಷೇರು ಮಾರುಕಟ್ಟೆಯಲ್ಲೂ ಯೆಸ್​ ಬ್ಯಾಂಕ್​ ಪಾಲು ಶೇ. 76 ರಷ್ಟು ಕುಸಿತ ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net