

ನವದೆಹಲಿ: ಅಚ್ಛೇ ದಿನ್ ಬರುತ್ತೆ ಎಂದು ಕಾದು ಕುಳಿತಿದ್ದ ಜನರಿಗೆ ಅಚ್ಛೇ ದಿನ್ ಕಾಣಿಸಲೇ ಇಲ್ಲ ಎಂದು ಸದಾ ಹೇಳುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನರೇಗಾ ಕೆಲಸಗಾರರ ಸಂಬಳದ ವಿಚಾರದಲ್ಲಿ ಮಾತನಾಡಿರುವ ಅವರು ಇದು ಯಾವ ರೀತಿಯ ಅಚ್ಛೇ ದಿನ ಎಂದು ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ.
"ಅನೇಕ ರಾಜ್ಯಗಳಲ್ಲಿ ನರೇಗಾ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳ ಕೊಡಲಾಗುತ್ತಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ಅವರಿಗೆ ಹೆಚ್ಚುವರಿ ಹಣಕಾಸಿನ ನೆರವು ನೀಡಬೇಕಾಗಿದ್ದಾಗ, ಕಾರ್ಮಿಕರ ಹಕ್ಕಾದ ಹಣವನ್ನು ಸಹ ಕೊಡಲು ನಿರಾಕರಿಸುತ್ತಿದೆ. ಕೆಲವು ಮನೆಗಳಲ್ಲಿ ಜನರು ತಮ್ಮ ಮನೆಗಳನ್ನು ಸಹ ನಡೆಸಲು ಸಾಧ್ಯವಾಗದ ಪರಿಸ್ಥಿತಿಗೆ ನಮ್ಮ ದೇಶ ಬಂದಿದೆ. ಇದು ಯಾವ ರೀತಿಯ ಅಚ್ಛೇ ದಿನ?" ಎಂದು ರಾಹುಲ್ ಗಾಂಧಿ ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಬಿಟ್ಟ ಸ್ಥಳ ತುಂಬಿ ಎಂದಿರುವ ರಾಹುಲ್, "ರಫೇಲ್ ಸ್ನೇಹಿತರು, ತೆರಿಗೆ ಸಂಗ್ರಹ - ದುಬಾರಿ ಇಂಧನ, ಪಿಎಸ್‌ಯು-ಪಿಎಸ್‌ಬಿಗಳ ಕುರುಡು ಮಾರಾಟ, ನೀವು ಪ್ರಶ್ನಿಸಿದರೆ ಜೈಲು. ಮೋದಿ ಸರ್ಕಾರ.." ಎಂದು ಹೇಳಿದ್ದಾರೆ. (ಏಜೆನ್ಸೀಸ್)