ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಜಾವಗಲ್​ ಶ್ರೀನಾಥ್, ರಾಹುಲ್​ ಡ್ರಾವಿಡ್​ರಿಂದ ಮತದಾನ

Javagal and Rahul
Published on

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ಜಾವಗಲ್​ ಶ್ರೀನಾಥ್​ ಮತ್ತು ರಾಹುಲ್​ ಡ್ರಾವಿಡ್​ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.

ಜಾವಗಲ್ ಶ್ರೀನಾಥ್ ಅವರು ತಮ್ಮ ಕುಟುಂಬ ಸಮೇತ ಮೈಸೂರಲ್ಲಿ ಮತದಾನ ಮಾಡಿದರು. ಪ್ರಸ್ತುತ ಟೀಮ್​ ಇಂಡಿಯಾದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಮಲ್ಲೇಶ್ವರಂ ಕ್ಷೇತ್ರದ ಡಾಲರ್ಸ್ ಕಾಲೋನಿ ಮತಗಟ್ಟೆ 53ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

Javagal Srinath Family

ನಟ ಉಪೇಂದ್ರ, ರಕ್ಷಿತ್​ ಶೆಟ್ಟಿ, ರಿಷಭ್​ ಶೆಟ್ಟಿ, ರಮೇಶ್​ ಅರವಿಂದ್​, ಶ್ರೀ ಮುರುಳಿ, ಅಮೂಲ್ಯ, ಮಾಲಾಶ್ರೀ, ಹರ್ಷಿಕಾ ಪೂಣಚ್ಚ, ನಟ ನೆನಪಿರಲಿ ಪ್ರೇಮ್​, ಡಾಲಿ ಧನಂಜಯ್​, ವಿಕ್ಕಿ ವರುಣ್​, ಕೃಷಿ ತಾಪಂಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈಗಾಗಲೇ ತಮ್ಮ ಮತವನ್ನು ಚಲಾಯಿಸಿದ್ದಾರೆ.

ರಾಜ್ಯದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 20.94% ರಷ್ಟು ಮತದಾನ ನಡೆದಿದೆ. ಕೇವಲ 4 ಗಂಟೆಗಲ ಅವಧಿಯಲ್ಲಿ ಈ ಪ್ರಮಾಣವನ್ನು ತಲುಪಿದ್ದು, ಮತದಾನ ಪ್ರಮಾಣದಲ್ಲಿ ಭಾರೀ ಏರಿಕೆ ಸೂಚನೆ ಸಿಕ್ಕಿದೆ.

ಮೇ 13ಕ್ಕೆ ಫಲಿತಾಂಶ

ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net