

ಇಸ್ಲಾಮಾಬಾದ್: ಪಾಕಿಸ್ತಾನದ ಖ್ಯಾತ ಗಾಯಕ ರಾಹತ್ ಫತೇಹ್ ಅಲಿ ಖಾನ್ ತನ್ನ ಶಿಷ್ಯನಿಗೆ ಶೂನಿಂದ ಹೊಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರೇ ಇದ್ದಾರೆ ಎಂದು ಪಥೇಹ್ ಅಲಿ ಖಾನ್ ಖಚಿತಪಡಿಸಿದ್ದಾರೆ.
ಘಟನೆ ನಂತರ ಆತ ಶಿಷ್ಯನ ಬಳಿ ಕ್ಷಮೆ ಯಾಚಿಸಿದರು. ತನ್ನನ್ನು ಬಿಟ್ಟು ಬಿಡುವಂತೆ ಶಿಷ್ಯ ಮನವಿ ಮಾಡುತ್ತಿರುವುದು ವೀಡಿಯೋದಲ್ಲಿ ಕಾಣಬಹುದು. ಸಿಬ್ಬಂದಿ ತಡೆದರೂ, ಅಲಿಖಾನ್ ತಾಳ್ಮೆ ಕಳೆದುಕೊಂಡು ಥಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವರಣೆ ನೀಡಿರುವ ಖಾನ್, ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಗುರು- ಶಿಷ್ಯರ ನಡುವಿನ ವಿಚಾರ ಎಂದು ಪ್ರತಿಕ್ರಿಯಿಸಿದ್ದಾರೆ.
ಶೂ ಏಟು ತಿಂದವನು ನನ್ನ ಸ್ವಂತ ಶಿಷ್ಯ. ಅವನು ಮಗನಿದ್ದಂತೆ. ಶಿಷ್ಯನು ತಪ್ಪು ಮಾಡಿದರೆ ಅದನ್ನು ಗುರು ಶಿಕ್ಷೆ ಕೊಟ್ಟು ತಿದ್ದಬೇಕು. ಅವನು ಒಳ್ಳೆಯದನ್ನು ಮಾಡಿದರೆ ಗೌರವಿಸಬೇಕು. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು. ಬಳಿಕ ಶಿಷ್ಯನ ಬಳಿ ಕ್ಷಮೆ ಯಾಚಿಸಿದರು.
ಬೂಟಿನ ಏಟು ತಿಂದವನು ಕೂಡ ವಿಡಿಯೋದಲ್ಲಿ ಘಟನೆಯನ್ನು ವಿವರಿಸಿದ್ದಾನೆ. ಪವಿತ್ರ ನೀರಿನ ಬಾಟಲ್ ನಾಪತ್ತೆಯಾಗಲು ನಾನೇ ಕಾರಣ ಎಂದು ಅವರು ಹೇಳಿದರು. ಇದಲ್ಲದೆ, ಅದರಲ್ಲಿ ಯಾವುದೇ ದುರುದ್ದೇಶವಿಲ್ಲ. ಅವರು ತಂದೆ ಇದ್ದಂತೆ.. ಅವರನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ್ದಾನೆ. ತಮ್ಮ ಶಿಕ್ಷಕರಿಗೆ ಮಾನಹಾನಿ ಮಾಡುವ ಉದ್ದೇಶದಿಂದ ಯಾರೋ ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಸಹ ಅವನು ತಿಳಿಸಿದ್ದಾನೆ. ರಾಹತ್ ಫತೇ ಅಲಿ ಖಾನ್ ಪಾಕಿಸ್ತಾನಿ ಗಾಯಕರಾಗಿದ್ದಾರೆ.