

ಬೆಂಗಳೂರು: ರೇಣುಕಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಕೋರ್ಟಿಗೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ, ರೇಣುಕಾಸ್ವಾಮಿ ಕೇವಲ ಪವಿತ್ರಾಗೆ ಮಾತ್ರ ಮೆಸೇಜ್ ಕಳುಹಿಸಿರಲಿಲ್ಲ. ಕನ್ನಡದ ಸ್ಟಾರ್ ನಟಿಯರಿಗೂ ಅವನು ಅಶ್ಲೀಲ ಮೆಸೇಜ್ ಕಳುಹಿಸಿದ್ದ ಅನ್ನೋದು ಬಯಲಾಗಿದೆ. ಈ ಜಾರ್ಜ್ಶೀಟ್ನಲ್ಲಿ ನಟಿ ರಾಗಿಣಿ, ಶುಭಾ ಪೂಂಜಾ ಹೆಸರು ಕೇಳಿ ಬಂದಿದೆ.
ಈ ಸುದ್ದಿ ನಿನ್ನೆ ಮಾಧ್ಯಗಳಲ್ಲಿ ಬಿತ್ತರವಾದ ಬೆನ್ನಲ್ಲೇ ನಟಿ ಶುಭಾ ಪೂಂಜಾ ಕ್ಲಾರೀಟಿ ಕೊಟ್ಟಿದ್ದಾರೆ. ಈಗ ಖಾಸಗಿವಾಹಿನಿಗೆ ರಾಗಿಣಿ ಕೂಡಾ ಸ್ಪಷ್ಟನೆ ನೀಡಿದ್ದಾರೆ.
ರಾಗಿಣಿ ಖಾಸಗಿವಾಹಿನಿ ಜತೆ ಮಾತನಾಡಿ, ನನ್ನ ಪ್ರೊಫೈಲ್ ಅನ್ನು ಏಜೆನ್ಸಿ ಹ್ಯಾಂಡಲ್ ಮಾಡುತ್ತದೆ. ಹೀಗಾಗಿ ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ. ಬಂದಿದ್ದರೂ ನಾನು ಅದನ್ನ ಓದುವುದಿಲ್ಲ. ನನ್ನ ಗಮನಕ್ಕೆ ಬಂದಂತೆ ಯಾವುದೇ ಕೆಟ್ಟ ಸಂದೇಶ ಬಂದಿಲ್ಲ ಎಂದು ರಾಗಿಣಿ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿ ನಿನ್ನೆ ಮಾಧ್ಯಗಳಲ್ಲಿ ಬಿತ್ತರವಾದ ಬೆನ್ನಲ್ಲೇ ನಟಿ ಶುಭಾ ಪೂಂಜಾ ಕ್ಲಾರೀಟಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ, ನನ್ನ ಎಲ್ಲ ಮಾಧ್ಯಮ ಮಿತ್ರರೇ, ರೇಣುಕಾಸ್ವಾಮಿ ಪ್ರಕರಣ ಕುರಿತಾಗಿ ಯಾರೆಲ್ಲ ನನಗೆ ಇಂದು ಬೆಳಿಗ್ಗೆಯಿಂದ ಕರೆ ಮಾಡುತ್ತಿದ್ದೀರ ಅವರಿಗೆಲ್ಲ ನಾನು ಈ ಕುರಿತಾಗಿ ಸ್ಪಷ್ಟನೆ ನೀಡುತ್ತಿದ್ದೇನೆ, ನಾನು ನನ್ನ ಖಾಸಗಿ ಖಾತೆಗೆ ಅಂತಹ ಯಾವುದೇ ಮೇಸೆಜ್ಗಳು ಬಂದಿಲ್ಲ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಮೊಬೈಲ್ ನಲ್ಲಿ ನಾವು ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ ಎಂದು ಪೊಲೀಸರಿಗೆ ಆರೋಪಿಗಳು ಹೇಳಿದ್ದಾರೆ. ಅವರ ಮಾತುಗಳನ್ನು ಚಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿದೆ.
ರಾಗಿಣಿ ದ್ವಿವೇದಿ , ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್ ನಿಂದ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ. ಪೊಲೀಸರ ವಿಚಾರಣೆ ವೇಳೆಯಲ್ಲಿ ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರದೋಶ್ ಮತ್ತು ವಿನಯ್ ನೀಡಿರುವ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಈ ನಟಿಯರಿಗೆ ಮಾತ್ರವಲ್ಲ, ಇನ್ನೂ ಹಲವು ನಟಿಯರಿಗೆ ಮೆಸೇಜ್ ಕಳುಹಿಸಿದ್ದ ಅನ್ನೋ ಮಾತು ಉಲ್ಲೇಖವಾಗಿದೆ.