ತಮ್ಮ ವಿಶಿಷ್ಟ ಧ್ವನಿ ಮತ್ತು ಅಂತರರಾಷ್ಟ್ರೀಯ ಮನ್ನಣೆಗಾಗಿ ಪ್ರಸಿದ್ಧರಾದ ವಾರಿಜಶ್ರೀ ಮತ್ತು ಜಾನಪದವನ್ನು ಸಮಕಾಲೀನ ಧ್ವನಿಯೊಂದಿಗೆ ಬೆರೆಸುವಲ್ಲಿ ಹೆಸರುವಾಸಿಯಾದ ರಘು ಕರ್ನಾಟಕದ ಅತ್ಯಂತ ಮೆಚ್ಚುಗೆ ಪಡೆದ ಸಂಗೀತಗಾರರಲ್ಲಿ ಒಬ್ಬರು.
ರಘು ದೀಕ್ಷಿತ್ ಹಾಗೂ ವಾರಿಜಶ್ರೀ ನಡುವೆ ವಯಸ್ಸಿನ ಅಂತರ:
ರಘು ದೀಕ್ಷಿತ್ ಅವರಿಗೆ ಈಗ 50 ವರ್ಷ ವಯಸ್ಸು. ವಾರಿಜಶ್ರೀ ಅವರಿಗೆ ಈಗ 34 ವರ್ಷ ವಯಸ್ಸು. ರಘು ದೀಕ್ಷಿತ್ ಹಾಗೂ ವಾರಿಜಶ್ರೀ ನಡುವೆ ವಯಸ್ಸಿನ ದೊಡ್ಡ ಅಂತರ ಇದೆ. 2005ರಲ್ಲಿ ಡ್ಯಾನ್ಸರ್ ಮಯೂರಿ ಉಪಾಧ್ಯ ಜೊತೆ ರಘು ದೀಕ್ಷಿತ್ ವಿವಾಹ ನೆರವೇರಿತ್ತು. 2019ರಲ್ಲಿ ಅವರಿಬ್ಬರು ವಿಚ್ಛೇನದ ಪಡೆದರು.
2ನೇ ಮದ್ವೆ ಕುರಿತಾಗಿ ರಘು ದೀಕ್ಷಿತ್ ಹೇಳಿದ್ದೇನು?
ರಘು ದೀಕ್ಷಿತ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನ ಕಂಡ ಅನುಭವವನ್ನ ಹಂಚಿಕೊಂಡು, ಈ ಹೊಸ ಆರಂಭವು ಅವರಿಗೆ ಆಳವಾದ ನೆಮ್ಮದಿಯನ್ನ ನೀಡಿದೆ ಎಂದ ʻಟೈಮ್ಸ್ ಆಫ್ ಇಂಡಿಯಾʼಗೆ ಹೇಳಿಕೊಂಡಿದ್ದಾರೆ. “ನಾನು ನಿಜವಾಗಿಯೂ ಇದನ್ನ ನಿರೀಕ್ಷಿಸಿರಲಿಲ್ಲ. ನನ್ನ ಜೀವನದ ಉಳಿದ ಭಾಗವನ್ನ ಒಂಟಿಯಾಗಿ ಮತ್ತು ಏಕಾಂಗಿಯಾಗಿ ಕಳೆಯಲು ಸಿದ್ಧನಾಗಿದ್ದೆ. ಆದರೆ, ಜೀವನಕ್ಕೆ ಬೇರೆ ಯೋಜನೆಗಳಿದ್ದವು. ಬಲವಾದ ಸ್ನೇಹದಿಂದ ಆರಂಭವಾದದ್ದು ಸಹಜವಾಗಿಯೇ ಪ್ರೀತಿ ಮತ್ತು ಒಡನಾಟವಾಗಿ ಬೆಳೆಯಿತು. ವಾರಿಜಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ ನಾವು ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ಉತ್ಸುಕರಾಗಿದ್ದೇವೆ” ಎಂದು ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.