ರಾಘವೇಂದ್ರಸ್ವಾಮಿ, ಚಂದ್ರಯಾನ-3 ಗಣಪ ಪ್ರತಿಷ್ಠಾಪನೆ

19 nrp 2.
ಎನ್.ಆರ್.ಪುರದ ಶ್ರೀ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ವಿದ್ಯಾಗಣಪತಿ.
Published on

ಎನ್.ಆರ್.ಪುರ: ಪಟ್ಟಣ ಹಾಗೂ ಸುತ್ತಮುತ್ತಲಿನ ಗಾಮೀಣ ಪ್ರದೇಶದಲ್ಲಿ ಸೋಮವಾರ ಒಟ್ಟು 113 ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಪಟ್ಟಣದಲ್ಲಿ 12 ಹಾಗೂ ಗ್ರಾಮೀಣ ಪ್ರದೇಶದಲ್ಲಿ 101 ಗಣಪತಿಮೂರ್ತಿ ಪ್ರತಿಷ್ಠಾಪಿಸಲಾಯಿತು.
ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಪಕ್ಷಾತೀತವಾಗಿ ಎಲ್ಲಾ ಹಿಂದುಗಳು ಸೇರಿ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಿಂದು ಮಹಾ ಗಣಪತಿ ಪ್ರತಿಷ್ಠಾಪಿಸಿದ್ದಾರೆ. ಎಲ್ಲಾ ಹಿಂದುಗಳು ಒಗ್ಗೂಡಿ ಹಿಂದೂ ಮಹಾಗಣಪತಿ ಬ್ಯಾನರ್‌ನಡಿ ಇದೇ ಮೊದಲ ಬಾರಿಗೆ ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಗಿಚ್ಚಗಿಲಿಗಿಲಿ ಖ್ಯಾತಿಯ ಕಲಾವಿದರಿಂದ ವಿಶಿಷ್ಟ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ.
ಗಣೇಶನ ವಿಸರ್ಜನೆ ವೇಳೆ ಪಟ್ಟಣವಲ್ಲದೆ ಬೇರೆ ಹಳ್ಳಿ ಹಾಗೂ ತಾಲೂಕಿನಿಂದಲೂ ಹಿಂದು ಕಾರ್ಯಕರ್ತರನ್ನು ಕರೆ ತಂದು ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಪಕ್ಷಾತೀತವಾಗಿ ಹಿಂದುಗಳನ್ನು ಒಗ್ಗೂಡಿಸುವ ಕಾರ್ಯ ಮಾಡಲಾಗಿದೆ. ಭಗವಧ್ವಜ ಹಿಡಿದ ಗಣಪ ಭಕ್ತರ ಗಮನ ಸೆಳೆಯುತ್ತಿದೆ. ಹಿಂದು ಮಹಾ ಗಣಪತಿ ಮಹೋತ್ಸವ 13 ದಿನಗಳ ಕಾಲ ನಡೆಯಲಿದೆ. ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಸಾತ್ಕೋಳಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣಪತಿ ಉತ್ಸವ 15 ದಿನಗಳ ಕಾಲ ನಡೆಯಲಿದೆ. ಬಿ.ಎಚ್.ಕೈಮರದಲ್ಲೂ ಸಹ ಇದೇ ಮೊದಲ ಬಾರಿಗೆ ಓಂ ಮಹಾ ಗಣಪತಿ ಸಮಿತಿ ಆಶ್ರಯದಲ್ಲಿ ಗಣೇಶೋತ್ಸವ ನಡೆಯುತ್ತಿದೆ. ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ವಿದ್ಯಾಗಣಪತಿ ಸಂಘದವರು ಪ್ರತಿಷ್ಫಾಪನೆ ಮಾಡಿರುವ ಗಣೇಶೋತ್ಸವ 11 ದಿನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net