

ನವದೆಹಲಿ: ( sakshi malik ) ನೃತ್ಯ ತಾರೆ ಮತ್ತು ನಟ ರಾಘವ್ ಜುಯಾಲ್ ನಟಿ ಸಾಕ್ಷಿ ಮಲಿಕ್ ಅವರನ್ನು ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ. ಇಬ್ಬರ ನಡುವೆ ದೊಡ್ಡ ಜಗಳ ನಡೆದಿದೆ ಎಂದು ನೆಟ್ಟಿಗರು ಭಾವಿಸಿದ್ದರು. ಆದರೆ ಈ ವಿಡಿಯೋ ಬೇರೆನೆ ತಿರುವು ಪಡೆದುಕೊಂಡಿದೆ.
ಈ ವಿಡಿಯೋದಲ್ಲಿ, ರಾಘವ್ ಮತ್ತು ಸಾಕ್ಷಿ ಜಗಳವಾಡುತ್ತಿರುವುದನ್ನು ಕಾಣಬಹುದು. ಸಾಕ್ಷಿ ಇದ್ದಕ್ಕಿದ್ದಂತೆ ರಾಘವ್ ಅವರ ಕೂದಲನ್ನು ಎಳೆದಿದ್ದಾರೆ. ಅದು ಕೂಡ ಕೋಪದಿಂದ, ರಾಘವ್ ಅವರು ಕೂಡ ತಕ್ಷಣ ನಟಿಯ ಕಪಾಳಕ್ಕೆ ಹೊಡೆದಿದ್ದಾರೆ. ಈ ವೇಳೆ ಅಲ್ಲಿದ್ದ ಸ್ನೇಹಿತರು ಅವರನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಈ ಜಗಳ ಇಬ್ಬರ ನಡುವೆ ತುಂಬಾ ಜೋರಾಗಿಯೇ ನಡೆದಿದೆ. ಈ ಇಬ್ಬರ ನಡುವಿನ ಜಗಳ ತುಂಬಾ ಜೋರಾಗಿದೆ ಎಂದು ಹಲವರು ಭಾವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ರಾಘವ್ ಮತ್ತು ಸಾಕ್ಷಿ ಸ್ವತಃ ಅಸಲಿ ಸಂಗತಿಯನ್ನು ಬಯಲು ಮಾಡಿದ್ದಾರೆ.
'ಇದೆಲ್ಲವೂ ಒಂದು ದೃಶ್ಯಕ್ಕಾಗಿ ಮಾಡಲಾಗುತ್ತಿರುವ ರಿಹರ್ಸಲ್, ಇದು ನಿಜವಾದ ಜಗಳವಲ್ಲ, ಇದು ಚಿತ್ರದ ಮೊದಲು ರಿಹರ್ಸಲ್ ಸಮಯದಲ್ಲಿ ನಡೆದ ಘಟನೆ' ಎಂದು ರಾಘವ್ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದಿದ್ದಾರೆ. ರಾಘವ್-ಸಾಕ್ಷಿ ಇಬ್ಬರೂ ನಟನೆಯಲ್ಲಿ ತುಂಬಾ ಫಿಟ್ ಆಗಿದ್ದಾರೆ. ಅದಕ್ಕಾಗಿಯೇ ಒಂದು ರಿಹರ್ಸಲ್ ವೀಡಿಯೊ ಇಡೀ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ರಾಘವ್ ಜುಯಾಲ್ ಎಂಬ ಹೆಸರನ್ನು ನೀವು ಕೇಳಿದಾಗ, ಮೊದಲು ನೆನಪಿಗೆ ಬರುವುದು ಅವರ ಹಾಸ್ಯ ಮತ್ತು ನೃತ್ಯ. ಅವರು ABCD, ಸ್ಟ್ರೀಟ್ ಡ್ಯಾನ್ಸರ್ 3D, ಸಲ್ಮಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಂತಹ ಚಿತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.