ರವೀಂದ್ರನಾಥ್ ಕಾಮತ್ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ

20 vpt. 3
ವೀರಾಜಪೇಟೆ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರ ದೇವಸ್ಥಾನ ಸಭೆಯಲ್ಲಿ ರವೀಂದ್ರನಾಥ್ ಕಾಮತ್, ಜೆ.ಎನ್.ಪುಷ್ಪರಾಜ್,ನರೇಂದ್ರ ಕಾಮತ್ ಇದ್ದರು.
Published on

ವಿರಾಜಪೇಟೆ: ವಿರಾಜಪೇಟೆ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದ ನೂತನ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎನ್.ರವೀಂದ್ರನಾಥ್ ಕಾಮತ್ ಆಯ್ಕೆಯಾಗಿದ್ದಾರೆ.

ವಿರಾಜಪೇಟೆ ದೇವಸ್ಥಾನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಅಧ್ಯಕ್ಷ ಎನ್.ಗೋಪಾಲಕೃಷ್ಣ ಕಾಮತ್ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ರವೀಂದ್ರನಾಥ್ ಕಾಮತ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉದ್ಯಮಿ ಜೆ.ಎನ್.ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ನರೇಂದ್ರ ಕಾಮತ್, ಜಂಟಿ ಕಾರ್ಯದರ್ಶಿಯಾಗಿ ವಿ.ಎಂ.ಪುರುಷೋತ್ತಮ್, ಖಜಾಂಚಿಯಾಗಿ ಮಾಳೇಟಿರ ಸಾಬ ಮುತ್ತಪ್ಪ, ಸಮಿತಿ ಸದಸ್ಯರಾಗಿ ಕೆ.ಜಿ.ಅರುಣ್ ಕುಮಾರ್, ಸುಮಂತ್ ಜೈನ್, ಎ.ಕೆ.ರವಿಶಂಕರ್, ಬಿ.ಎ.ಅಂಬಿ ಕೃಷ್ಣಮೂರ್ತಿ, ಡಾ.ಎನ್.ವೀರೇಂದ್ರ ಕಾಮತ್, ಕುಪ್ಪಂಡ ರಾಜೀವ್ ಕಾರ್ಯಪ್ಪ, ಎನ್.ವೆಂಕಟೇಶ್ ಕಾಮತ್, ಜೆ.ಪಿ.ಅರುಣ್, ಜೆ.ವಿ.ಪ್ರಕಾಶ್, ಪಟ್ಟಡ ವಿಕ್ರಂ, ಕಂಡ್ರತಂಡ ಟಿ.ಮುತ್ತಣ್ಣ, ಮನೆಯಪಂಡ ರಿನ್ ಕಾಳಪ್ಪ ಮುಂತಾದವರನ್ನು ಆಯ್ಕೆ ಮಾಡಲಾಯಿತು.

55 ವರ್ಷಗಳಿಂದ ಬಸವೇಶ್ವರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಮೋಹನ್ ಭಟ್ ಅವರನ್ನೇ ಆಗಸ್ಟ್ 26 ರಿಂದ ಸೆಪ್ಟೆಂಬರ್ 6 ರವರೆಗೆ ಜರುಗುವ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾಂತಾರ ಚಿತ್ರದ ವರಾಹ ರೂಪಂ ಗೀತ ರಚನೆಕಾರ ಶಶಿರಾಜ್ ಕಾವೂರ್, ಕಳೆದ ವರ್ಷ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಈ ಬಾರಿಯೂ ಪ್ರಶಸ್ತಿಗೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವದು ಎಂದು ನೂತನ ಅಧ್ಯಕ್ಷ ರವೀಂದ್ರನಾಥ್ ಕಾಮತ್ ಮಾಹಿತಿ ನೀಡಿದರು.

ಪ್ರಸ್ತುತ ವರ್ಷ ಗಣೇಶೋತ್ಸವ ಸಮಿತಿ ವತಿಯಿಂದ ಅದ್ದೂರಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಆ.31 ರಂದು ವಾಯ್ಸ ಆಫ್ ವೀರಾಜಪೇಟೆ ಗಾಯನ ಸ್ಪರ್ಧೆ ಏರ್ಪಡಿಸಲಾಗುವದು ಎಂದು ಮಾಹಿತಿ ನೀಡಿದರು.

ಸಂತಾಪ: ಸಭೆಯ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಮಾಜಿ ಅಧ್ಯಕ್ಷ ಎನ್.ಗೋಪಾಲ ಕೃಷ್ಣ ಕಾಮತ್, ಮಣಿಕಾರ್ ಗೋಪಾಲಕೃಷ್ಣ ಶಾನ್ ಭೋಗ್, ಕರ್ನಲ್ ಕುಪ್ಪಂಡ ಮುತ್ತಣ್ಣ, ಪಿ.ಎಂ.ಉತ್ತಯ್ಯ, ಮುಕ್ಕಾಟಿರ ಶಿವು ಮಾದಪ್ಪ ಹಾಗೂ ಗೀತಾ ಇಂದ್ರಕುಮಾರ್ ಅವರಿಗೆ ಸಂತಾಪ ಸೂಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net