'ರಾಂಜಾನಾ' ಸಿನಿಮಾ ರೀ ರಿಲೀಸ್; ‌‘AI’ ಕ್ಲೈಮ್ಯಾಕ್ಸ್ ಬದಲಾವಣೆಗೆ ಧನುಷ್ ಬೇಸರ|raanjhanaa

dhanush
Published on

raanjhanaa; ಕೃತಕ ಬುದ್ಧಿಮತ್ತೆ (AI) ಬದಲಾವಣೆಯೊಂದಿಗೆ ನಟ ಧನುಷ್ ಅಭಿನಯದ 'ರಾಂಜಾನಾ' ಚಿತ್ರದ ಮರು ಬಿಡುಗಡೆಗೆ ಸಂಬಂಧಿಸಿದಂತೆ ವಿವಾದ ಬುಗಿಲೆದ್ದಿದೆ. ನಿರ್ದೇಶಕ ಆನಂದ್ ಎಲ್ ರಾಯ್ ನಂತರ, ನಟ ಧನುಷ್ ಸಹ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಖಂಡಿಸಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರದ ಆತ್ಮವನ್ನೇ ಕಸಿದುಕೊಂಡಿದೆ ಎಂದು ಧನುಷ್​ ಆಕ್ರೋಶ ಹೊರಹಾಕಿದ್ದಾರೆ.

ಆಗಸ್ಟ್ 1 ರಂದು ತಮಿಳಿನಲ್ಲಿ 'ಅಂಬಿಕಾಪತಿ' ಎನ್ನುವ ಟೈಟಲ್‌ನೊಂದಿಗೆ 'ರಾಂಜಾನಾ' ಚಿತ್ರವನ್ನು ರೀ- ರಿಲೀಸ್ ಮಾಡಲಾಗಿದೆ. ಈ ಚಿತ್ರದಲ್ಲಿ 'ಎಐ' ಬಳಸಿಕೊಂಡು 'ಕುಂದನ್' (ಧನುಷ್) ಪಾತ್ರ ಸತ್ತಿಲ್ಲ, ಅವನು ಬದುಕಿದ್ದಾನೆ ಎನ್ನುವ ಕ್ರೈಮ್ಯಾಕ್ಸ್ ತೋರಿಸಲಾಗಿದೆ.

ಇನ್ನೂ ಈ ಬಗ್ಗೆ ನಟ ಧನುಷ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದು, ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಮಾಡಲಾಗಿರುವ ಬದಲಾವಣೆ ನನ್ನನ್ನು ಕೆರಳಿಸಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ಕ್ಲೈಮ್ಯಾಕ್ಸ್ ಬದಲಾಯಿಸಿರುವುದು ಸಿನಿಮಾದ ಆತ್ಮವನ್ನೇ ಕೊಂದಿದೆ ಎಂದು ಧನುಷ್ ಹೇಳಿದ್ದಾರೆ. ತಮ್ಮ ಆಕ್ಷೇಪಗಳನ್ನು ನಿರ್ಲಕ್ಷಿಸಿ ಚಿತ್ರತಂಡ ಮುಂದುವರೆದಿದೆ ಎಂದು ಅವರು ಕೆಂಡ ಕಾರಿದ್ದಾರೆ.

12 ವರ್ಷಗಳ ಹಿಂದೆ ನಾನು ಒಪ್ಪಿಕೊಂಡ ಸಿನಿಮಾ ಇದಲ್ಲ. AI ಬಳಸಿ ಬದಲಾಯಿಸುವುದು ಆತಂಕಕಾರಿ ವಿಷಯ. ಸಿನಿಮಾದ ಪರಂಪರೆ ಮತ್ತು ಪ್ರಾಮಾಣಿಕತೆಗೆ ಇದು ಧಕ್ಕೆ ತರುತ್ತದೆ. ಕಾನೂನು ಮೂಲಕ ಇದನ್ನು ತಡೆಯಬೇಕು ಎಂದು ಧನುಷ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಧನುಷ್ ಪಾತ್ರ ಸಾಯುತ್ತದೆ. ಆದರೆ ರಿ-ರಿಲೀಸ್‌ ಆಗಿರುವ ಎಐ ಸಿನಿಮಾದಲ್ಲಿ ವರ್ಷನ್​ನಲ್ಲಿ ಕಣ್ಣು ತೆರೆಯುವಂತೆ ತೋರಿಸಲಾಗಿದೆ.

ಆನಂದ್ ಎಲ್ ರೈ ನಿರ್ದೇಶನದ ರಾಂಜಾನಾ 2013 ರಲ್ಲಿ ಬಿಡುಗಡೆಯಾಗಿತ್ತು. ನಿರ್ದೇಶಕ ಆನಂದ್ ಅವರು ಕೂಡ ಈ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನನ್ನ ಒಪ್ಪಿಗೆಯಿಲ್ಲದೆ ರಿಲೀಸ್ ಮಾಡಲಾಗಿದೆ. ಇದು ನನಗೆ ತೀರ ಬೇಸರ ತರಿಸಿದೆ ಎಂದಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net