ಟೇಕಾಫ್​ ಆದ ಬೆನ್ನಲ್ಲೇ ಸಿಎಂ ಆದಿತ್ಯನಾಥ್​ ಅವರಿದ್ದ ಹೆಲಿಕಾಪ್ಟರ್​ಗೆ ಪಕ್ಷಿ ಡಿಕ್ಕಿ: ತುರ್ತು ಭೂಸ್ಪರ್ಶ

CM Yogi
Published on

ವಾರಾಣಸಿ: ಟೇಕಾಫ್ ಆದ ಬೆನ್ನಲ್ಲೇ ಪಕ್ಷಿ ಡಿಕ್ಕಿಯಾದ ಪರಿಣಾಮ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿದ್ದ ಹೆಲಿಕಾಪ್ಟರ್​ ಅನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್​ ಅವರು ಎರಡು ದಿನಗಳ ವಾರಾಣಸಿ ಪ್ರವಾಸದಲ್ಲಿದ್ದರು. ಇಂದು ವಾರಾಣಸಿಯಿಂದ ಲಖನೌ ಮೂಲದ ಹೆಲಿಕಾಪ್ಟರ್​ನಿಂದ ಲಖನೌ ಕಡೆಗೆ ಹೊರಟಾಗ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಪಕ್ಷಿಯೊಂದು ಡಿಕ್ಕಿ ಹೊಡೆಯಿತು. ಇದಾದ ಬಳಿಕ ಪೈಲಟ್​ ತುರ್ತು ಭೂಸ್ಪರ್ಶಕೆ ಮನವಿ ಮಾಡಿ ವಾರಾಣಸಿಯಲ್ಲೇ ಲ್ಯಾಂಡಿಂಗ್​ ಮಾಡಿದ್ದಾರೆ.

ತುರ್ತು ಭೂಸ್ಪರ್ಶದ ಬಳಿಕ ಸಿಎಂ ಯೋಗಿ ಆದಿತ್ಯನಾಥ್​ ಅವರು ವಾರಾಣಸಿ ವಿಮಾನ ನಿಲ್ದಾಣದಿಂದ ಲಖನೌಗೆ ಹಾರಿದರು ಎಂದು ಜಿಲ್ಲಾಧಿಕಾರಿ ಕುಶಾಲ್​ರಾಜ್​ ಶರ್ಮಾ ಮಾಹಿತಿ ನೀಡಿದರು. ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net