ಮದ್ಯದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಮಹಿಳೆ! ವಿಡಿಯೋ ವೈರಲ್​

Marriage
Published on

ನವದೆಹಲಿ: ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು... ಈ ಹಾಡನ್ನು ಎಲ್ಲರೂ ಕೇಳಿರುತ್ತೀರಿ. ನಂಜುಂಡಿ ಕಲ್ಯಾಣ ಚಿತ್ರದಲ್ಲಿ ನಟಿ ಮಾಲಾಶ್ರೀ ಹೇಗೆ ಮೈಚಳಿ ಬಿಟ್ಟು ಕುಣಿದಿದ್ದರೋ ಅದನ್ನು ಮತ್ತೆ ನೆನಪಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಹಿಳೆಯೊಬ್ಬರು ಎಣ್ಣೆ ಮತ್ತಿನಲ್ಲಿ ಮದುವೆ ಮಂಟಪದಲ್ಲಿ ಮೈಚಳಿ ಬಿಟ್ಟು ಕುಣಿದಿದ್ದಾರೆ.

ಅನೇಕ ಸಂದರ್ಭಗಳನ್ನು ಮದ್ಯಪಾನ ಮೂಲಕ ಅದ್ಧೂರಿ ಆಚರಣೆ ಮಾಡುವುದು ಉತ್ತರ ಭಾರತದಲ್ಲಿ ಸಾಮಾನ್ಯ. ಅದರಲ್ಲೂ ಮದುವೆ ಸಮಾರಂಭಗಳಲ್ಲಿ ಗಂಡಸರು ಎಣ್ಣೆ ಹೊಡೆದು ಕುಣಿದು ಕುಪ್ಪಳಿಸುವುದನ್ನು ನೋಡಿದ್ದೇವೆ. ಎಲ್ಲಡೆ ಇದು ಸಾಮಾನ್ಯ ಕೂಡ. ಆದರೆ, ಮಹಿಳೆಯರು ಈ ರೀತಿ ಮಾಡುವುದು ವಿರಾಳತಿವಿರಳ. ಆದರೆ, ಉತ್ತರ ಭಾರತದಲ್ಲಿ ಅಪರೂಪಕ್ಕೊಮ್ಮೆ ಇಂತಹ ದೃಶ್ಯ ಕಾಣಸಿಗುತ್ತದೆ. ಇಲ್ಲಿ ಮಹಿಳೆಯರು ಕೂಡ ಮದ್ಯದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ಸೊಂಟ ಬಳುಕಿಸುತ್ತಾರೆ.

ವಿಶೇಷ ಡಾನ್ಸ್​ ಮೂಲಕ ಮಹಿಳೆಯೊಬ್ಬರು ಕುಡಿದ ಮತ್ತಿನಲ್ಲಿ ಮದುವೆ ಮಂಟಪದಲ್ಲಿ ಮನರಂಜನೆ ನೀಡಿರುವ ವಿಡಿಯೋ ವೈರಲ್​ ಆಗಿದೆ. 1985ರಲ್ಲಿ ತೆರೆಕಂಡ ಕಾಲ ಸೂರಜ್​ ಚಿತ್ರದ ಡು ಘೂಂಟ್​ ಪಿಲಾ ದೆ ಹಾಡಿಗೆ ಮಹಿಳೆಯೊಬ್ಬರು ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ. ನೆಲದ ಮೇಲೆಲ್ಲ ಬಿದ್ದ ಒದ್ದಾಡಿದ್ದಾರೆ.

ಈ ವಿಡಿಯೋವನ್ನು ಎಜಿ ಸಿದ್ದಿಕಿ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಿದ್ದು ಸಿಕ್ಕಾಪಟ್ಟೆ ವ್ಯೂವ್ಸ್​ ಗಿಟ್ಟಿಸಿಕೊಳ್ಳುತ್ತಿದೆ. ಈವರೆಗೂ 2 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದ್ದು, ಸಿಕ್ಕಾಪಟ್ಟೆ ಕಾಮೆಂಟ್​ ಹರಿದುಬರುತ್ತಿವೆ. ಆಕೆಯ ಗಂಡನಿಗೆ ದೇವರು ಒಳ್ಳೆಯದು ಮಾಡಲಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಹೀಗೆ ಅನೇಕರು ಫನ್ನಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net