VIDEO: ರಾಜಸ್ಥಾನದ ಸ್ನೇಕ್​ ಮ್ಯಾನ್​ ಎಂದೇ ಪ್ರಸಿದ್ಧಿಯಾಗಿದ್ದ ವಿನೋದ್​ ತಿವಾರಿ ಹಾವಿನಿಂದಲೇ ದುರ್ಮರಣ

Snake man
Published on

ಜೈಪುರ: ಹಲವು ವರ್ಷಗಳಿಂದ ಹಾವುಗಳನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ರಾಜಸ್ಥಾನದ "ಹಾವಿನ ಮನುಷ್ಯ" ಎಂದೇ ಖ್ಯಾತಿ ಪಡೆದಿದ್ದ ವಿನೋದ್​ ತಿವಾರಿ ಕೊನೆಗೆ ಹಾವು ಕಡಿತದಿಂದಲೇ ದುರಂತ ಸಾವಿಗೀಡಾಗಿದ್ದಾರೆ.

ವಿನೋದ್​ ತಿವಾರಿ (45) ಅವರು ಚುರು ಜಿಲ್ಲೆಯ ನಿವಾಸಿ. ಸುಮಾರು 20 ವರ್ಷಗಳಿಂದ ಉರಗ ರಕ್ಷಣೆಯಲ್ಲಿ ತೊಡಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಹಾವುಗಳನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಹೆಗ್ಗಳಿಕೆ ವಿನೋದ್​ ತಿವಾರಿ ಅವರಿಗಿದೆ. ಈ ಕಾರಣದಿಂದಲೇ ಅವರನ್ನು ರಾಜಸ್ಥಾನದ ಹಾವಿನ ಮನುಷ್ಯ ಎಂದು ಕರೆಯಲಾಗುತ್ತದೆ.

ಇದೀಗ ಹಾವಿನಿಂದಲೇ ಮೃತಪಟ್ಟಿರುವುದು ದುರಂತದ ಸಂಗತಿಯಾಗಿದೆ. ಶನಿವಾರ ಬೆಳಗ್ಗೆ ಚುರು ಜಿಲ್ಲೆಯ ಗೊಗಮೆಡಿ ಏರಿಯಾದಲ್ಲಿರುವ ಅಂಗಡಿಯೊಂದರ ಹೊರಭಾಗದಲ್ಲಿ ತಿವಾರಿ ಅವರು ವಿಷಕಾರಿ ನಾಗರಹಾವನ್ನು ಹಿಡಿದು, ಅದನ್ನು ಬ್ಯಾಗ್​ ಒಳಗೆ ಹಾಕುವಾಗ ಹಾವು ತಿವಾರಿಯ ಕೈಬೆರಳಿಗೆ ಕಡಿದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ.

ಹಾವಿನಿಂದ ಕಡಿತಕ್ಕೆ ಒಳಗಾಗ ಕೆಲವೇ ನಿಮಿಷಗಳಲ್ಲಿ ತಿವಾರಿ ದುರ್ಮರಣಕ್ಕೀಡಾಗಿದ್ದಾರೆ. ವಿನೋದ್​ ಅವರು ತುಂಬಾ ಒಳ್ಳೆಯ ಹೆಸರನ್ನು ಮಾಡಿದ್ದರು. ಹೀಗಾಗಿ ಭಾನುವಾರ ನಡೆದ ಅವರ ಅಂತ್ಯಕ್ರಿಯೆ ವೇಳೆ ಸಾವಿರಾರು ಜನ ಭಾಗಿಯಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net