ಸಾಫ್ಟ್​ವೇರ್​ ಇಂಜಿನಿಯರ್​ ಸೂಸೈಡ್​: ಗಂಡನ ಸಾವಿನ ಸುದ್ದಿ ಕೇಳಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿದ ಪತ್ನಿ

Death
Published on

ಹೈದರಾಬಾದ್​: ಸಾಫ್ಟ್​ವೇರ್​ ಇಂಜಿನಿಯರ್​ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ತೆಲ್ಲಪುರ್​ನಲ್ಲಿ ನಡೆದಿದೆ.

ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾರದೇ ಇಬ್ಬರು ಮಕ್ಕಳೊಂದಿಗೆ ಪತ್ನಿಯು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡ ಚಂದ್ರಕಾಂತ್​ ರಾವ್​​ ಬಿಎಚ್​ಇಎಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಮಗ ಪ್ರೀತಂ (9) ಮತ್ತು ಮಗಳು ಸರ್ವಜ್ಞ (ಒಂದೂವರೆ ವರ್ಷ) ಇಬ್ಬರನ್ನು ಕೆರೆಗೆ ಎಸೆದು ತಾನು ಕೆರೆಗೆ ಹಾರಿ ಪತ್ನಿ ಲಾವಣ್ಯ ಪ್ರಾಣ ಕಳೆದುಕೊಂಡಿದ್ದಾರೆ.

ಚಂದ್ರಕಾಂತ ರಾವ್​ ಅವರು ಬ್ಯಾಂಕ್​ನಲ್ಲಿ ಸಾಲ ಪಡೆದು ಬಿಎಚ್​ಇಎಲ್​ ಬಳಿಯ ಬೈರಗುಡದಲ್ಲಿ ಅಪಾರ್ಟ್​ಮೆಂಟ್​ ಖರೀದಿಸಿದ್ದರು.​ ಆದರೆ, ಚಂದ್ರಕಾಂತ್​ಗೆ ಸಾಲ ತೀರಿಸುವುದು ಕಷ್ಟವಾಗಿತ್ತು. ಅವರ ತಂದೆ ಬಿಎಚ್​ಇಎಲ್​ ನಿವೃತ್ತ ನೌಕರರಾಗಿದ್ದರಿಂದ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದರು. ಆದರೆ ತಂದೆ ನಿರಾಕರಿಸಿದ್ದರಂತೆ. ಇದೇ ವಿಚಾರವಾಗಿ ಕಳೆದ ಒಂದು ವರ್ಷದಿಂದಲೂ ಜಗಳ ನಡೆಯುತ್ತಿತ್ತು.

6 ಎಕರೆಯಲ್ಲಿ 2 ಎಕರೆ ಜಮೀನು ಮಾರಿ ಸಾಲವನ್ನು ತೀರಿಸಲು ಚಂದ್ರಕಾಂತ್​ ರಾವ್​ ಮುಂದಾಗಿದ್ದರು. ಆದರೆ, ತಂದೆ ಒಪ್ಪಿರಲಿಲ್ಲ. ಇತ್ತರ ನಿರಂತರ ಜಗಳದಿಂದ ಮನನೊಂದಿದ್ದ ಚಂದ್ರಕಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಗಂಡ ಸಾವಿನ ಸುದ್ದಿ ಕೇಳಿದ ಲಾವಣ್ಯ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಜೀವ ಬಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net