

ಕಾಬುಲ್: ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ. ಆಫ್ಘಾನ್ ಬಾವುಟ ಹಿಡಿದು ಪ್ರತಿಭಟಿಸುತ್ತಿದ್ದ ಇಬ್ಬರು ಪ್ರತಿಭಟನಾಕಾರರನ್ನು ತಾಲಿಬಾನ್ ಬಂಡುಕೋರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಈ ಘಟನೆ ಆಫ್ಘಾನ್ನ ಜಲಾಲಬಾದ್ನಲ್ಲಿ ನಡೆದಿದ್ದು, ಡಜನ್ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಪ್ರತಿಭಟನಾಕಾರರು ಆಫ್ಘಾನ್ ಬಾವುಟ ಹಿಡಿದು ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.
ತಾಲಿಬಾನಿಗಳು ಆಫ್ಘಾನ್ ಬಾವುಟವನ್ನು ಕಿತ್ತೆಸೆದು ತಾಲಿಬಾನ್ ಬಾವುಟವನ್ನು ಹಾರಿಸಿದ್ದು, ಮತ್ತೆ ಆಫ್ಘಾನ್ ಬಾವುಟವನ್ನು ಮರುಸ್ಥಾಪಿಸಿ ಎಂದು ಒಂದು ಗುಂಪು ಪ್ರತಿಭಟನೆ ನಡೆಸುವಾಗ ತಾಲಿಬಾನಿಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ.
ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಇದೀಗ ಸರ್ಕಾರ ರಚನೆಗೆ ತಯಾರಿ ನಡೆಸುತ್ತಿದೆ ಎಂದು ತಿಳಿದು. ಈಗಾಗಲೇ ಅನೇಕ ಸಾವು-ನೋವುಗಳು ಆಫ್ಘಾನ್ನಲ್ಲಿ ಸಂಭವಿಸುತ್ತಿವೆ. ಒಂದು ವೇಳೆ ತಾಲಿಬಾನ್ ಆಡಳಿತ ಜಾರಿಯಾದರೆ, ಆಫ್ಘಾನ್ ಅಕ್ಷರಶಃ ನರಕವಾಗಲಿದೆ. (ಏಜೆನ್ಸೀಸ್)