

ಕೋಯಿಕ್ಕೋಡ್: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಯೂನಿಫಾರ್ಮ್ ಧರಿಸಿ ಫೋಟೋಶೋಟ್ ಮಾಡಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಸೇವ್ ದಿ ಡೇಟ್ ಎಂಬ ಟ್ಯಾಗ್ಲೈನ್ನೊಂದಿಗೆ ಕೆಲ ದಿನಗಳ ಹಿಂದೆ ಕೋಯಿಕ್ಕೋಡ್ ನಗರದ ಮಹಿಳಾ ಸಬ್ಇನ್ಸ್ಪೆಕ್ಟರ್ ಸಮವಸ್ತ್ರದಲ್ಲಿ ಫೋಟೋಶೂಟ್ ನಡೆಸಿದ್ದರು. ಸ್ವಲ್ಪ ದಿನಗಳ ಬಳಿಕ ಫೋಟೋಗಳು ತುಂಬಾ ವೈರಲ್ ಆಗಿದ್ದು, ಟೀಕೆಗಳು ಕೇಳಿಬರುತ್ತಿವೆ.
2015 ರಲ್ಲಿ ಕೇರಳ ಡಿಜಿಪಿ ಆಗಿದ್ದ ಟಿ.ಪಿ.ಸೆನ್‌ಕುಮಾರ್ ಅವರು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಮವಸ್ತ್ರವನ್ನು ಧರಿಸಿರುವ ಪೋಟೋಗಳನ್ನು ಪೋಸ್ಟ್ ಮಾಡದಿರುವಂತೆ ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ, ಜಾಲತಾಣಗಳಲ್ಲಿ ಸಂವಹನ ನಡೆಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು.
ಇದೀಗ ಆದೇಶವನ್ನು ಉಲ್ಲಂಘಿಸಿ ಮಹಿಳಾ ಪೊಲೀಸ್ ಅಧಿಕಾರಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಕಠಿಣ ಕ್ರಮ ಎದರಿಸುವ ಸಾಧ್ಯತೆ ಇದೆ. (ಏಜೆನ್ಸೀಸ್)