VIDEO| ಬೋಲ್ಡ್​ ಸೀನ್​ ಮೂಲಕ ಎಲ್ಲರ ಹುಬ್ಬೇರಿಸಿದ ಸಮಂತಾ: ಮಾದಕ ದೃಶ್ಯಗಳು ವೈರಲ್​!

Samantha
Published on

ಹೈದರಾಬಾದ್​: ಬಾಲಿವುಡ್​ ನಟ ಮನೋಜ್ ಬಾಜ್ಪಾಯಿ ಮುಖ್ಯ ಪಾತ್ರದಲ್ಲಿ ನಟಿಸಿರುವ ದಿ ಫ್ಯಾಮಿಲಿ ಮ್ಯಾನ್​ ವೆಬ್​ ಸರಣಿಯ 2ನೇ ಸೀಸನ್​ನಲ್ಲಿ ನಟಿ ಸಮಂತಾ ಅಕ್ಕಿನೇನಿ ನಟಿಸಿದ್ದಾರೆ. ಈ ಚಿತ್ರವು ಅಮೇಜಾನ್​ ಪ್ರೈಂನಲ್ಲಿ ಬಿಡುಗಡೆಯಾಗುವ ಮೂಲಕ ಸಮಂತಾರ ಮೊದಲ ಡಿಜಿಟಲ್ ವೇದಿಕೆಯ ಚಿತ್ರವಾಗಿದೆ. ​

ಶ್ರೀಲಂಕಾದ ತಮಿಳು ಕ್ರಾಂತಿಕಾರಿ ರಾಜಿ ಪಾತ್ರದಲ್ಲಿ ಸಮಂತಾ ನಟಿಸಿದ್ದು, ಇದೇ ಮೊದಲ ಬಾರಿಗೆ ಸಮಂತಾ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಜೂನ್​ 4ರಂದು ಬಿಡುಗಡೆಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ.

ಇನ್ನು ಟ್ರೈಲರ್​ ಬಿಡುಗಡೆಯಾದಗಲೇ ನೆಟ್ಟಿಗರು ಸಮಂತಾ ಆಯ್ಕೆ ಮಾಡಿಕೊಂಡ ಪಾತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಮಿಳಿಗರ ಮೇಲೆ ಕೆಟ್ಟ ಪರಿಣಾಮ ಬೀರುವ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಸಮಂತಾ ವಿರುದ್ಧ #ShameOnSamantha ಎಂಬ ಹ್ಯಾಶ್​ಟ್ಯಾಗ್​ ಸೃಷ್ಟಿಸಿ ಟ್ರೆಂಡ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಫ್ಯಾಮಿಲಿ ಮ್ಯಾನ್​ ವೆಬ್​ ಸರಣಿಯನ್ನು ಬ್ಯಾನ್​ ಮಾಡುವಂತೆಯೂ ಆಗ್ರಹಿಸಿದ್ದರು.

ಈ ವೆಬ್​ ಸರಣಿಯಲ್ಲಿ ಸಮಂತಾ ಅವರು ತರಬೇತಿ ಪಡೆದ ಕಮ್ಯಾಂಡೋ ರಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿ ಇಲ್ಲದಿರುವ ಪಾತ್ರಧಾರಿಯಾಗಿ ತೋರಿಸಲಾಗಿದೆ.

ಇನ್ನು ಸಮಂತಾ ಅವರು ನಟನೆಯ ಬಗ್ಗೆಯೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಅವರ ದೈಹಿಕ ಭಾಷೆ ಮತ್ತು ನಟನಾ ಕೌಶಲ್ಯವನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಸಮಂತಾರ ಬೋಲ್ಡ್​ನೆಸ್​ ಎಲ್ಲರ ಹುಬ್ಬೇರಿಸುತ್ತದೆ. ಆಕೆಯ ಲೈಂಗಿಕ ಕಿರುಕುಳ ಅಥವಾ ಬೆಡ್​ ಸೀನ್​ ಸಾಮಾಜಿಕ ಜಾಲತಾಣಿಗರನ್ನು ಅಚ್ಚರಿಗೆ ದೂಡಿದೆ. (ಏಜೆನ್ಸೀಸ್​)

ವಿಡಿಯೋ ನೋಡಲು ಲಿಂಕ್​ ಮೇಲೆ ಕ್ಲಿಕ್ಕಿಸಿ: https://www.youtube.com/watch?v=xCbyq7k127Q&t=2s

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net