

ಹೈದರಾಬಾದ್: ಟಾಲಿವುಡ್ ಸಿನಿಮಾ ‘ಪುಷ್ಪ: ದಿ ರೈಸ್’ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ ಮತ್ತು ಅದರ ಡೈಲಾಗ್‌ಗಳು ಹಾಗೂ ಸಿಗ್ನೇಚರ್ ಸ್ಟೆಪ್ಸ್ ಆಗಾಗ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ನಲ್ಲಿರುತ್ತವೆ. ಅದರಲ್ಲೂ ಅಲ್ಲು ಅರ್ಜುನ್ ಅವರ ತಗ್ಗೆದೆಲೆ ಡೈಲಾಗ್ ಮಾತ್ರ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಪ್ರಪಂಚದಾದ್ಯಂತದ ಜನರು ಅದರ ಅನುಸರಣೆಯನ್ನು ಮಾಡಿದ್ದಾರೆ.
ಯುವಕರಿಂದ ಹಿಡಿದು ವಯಸ್ಸಾದ ನಾಗರಿಕರು ಕೂಡ ತೆಗ್ಗೆದೆಲೆ ಡೈಲಾಗ್ ಹೊಡೆದು ಸಿಗ್ನೆಚರ್ ಸ್ಟೈಲ್ ಕಾಪಿ ಮಾಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದರೂ ಸಿನಿಮಾ ಮೇಲಿನ ಕ್ರೇಜ್ ಮಾತ್ರ ಇನ್ನು ಕಡಿಮೆ ಆಗಿಲ್ಲ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಸೆಎಸ್ಸೆಲ್ಸಿ ಪರೀಕ್ಷೆಯಲ್ಲೂ ತೆಗ್ಗೆದೆಲೆ ಡೈಲಾಗ್ ಸದ್ದು ಮಾಡಿದೆ. ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಬರೆಯುವ ಬದಲು ಪುಪ್ಪ ಚಿತ್ರದ ಡೈಲಾಗ್ ಅನ್ನು ತನ್ನದೇ ರೀತಿಯಲ್ಲಿ ಬರೆದಿದ್ದಾನೆ. ಪುಷ್ಪ...ಪುಷ್ಪರಾಜ್.. ಅಪುನ್ ಲಿಖೇಗಾ ನಹಿ ಎಂದು ಬರೆದಿದ್ದು, ನಾನು ಪರೀಕ್ಷೆ ಬರೆಯೋದೇ ಇಲ್ಲ ಎಂಬುದು ಅದರರ್ಥವಾಗಿದೆ.
ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಫೋಟೋವನ್ನು ಶಿಕ್ಷಕರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. (ಏಜೆನ್ಸೀಸ್)