ನನ್ನ ಪತ್ನಿ ನಾಪತ್ತೆ ಸರ್​...ನನ್ನ ಗಂಡನೂ ಕಾಣಿಸ್ತಿಲ್ಲ ಸರ್: ಕೇಸು ದಾಖಲಿಸಿದ ಪೊಲೀಸರಿಗೆ ಬಿಗ್​ ಶಾಕ್​!​

Monica das
Published on

ಹೈದರಾಬಾದ್​: ನನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಸರ್​... ನನ್ನ ಪತಿಯೂ ಕಾಣಿಸುತ್ತಿಲ್ಲ ಹುಡುಕಿಕೊಡಿ ಸರ್​... ಎಂದು ಏಕಕಾಲದಲ್ಲಿ ಪುರುಷ ಮತ್ತು ಮಹಿಳೆಯೊಬ್ಬಳು ದೂರು ನೀಡಿರುವ ಘಟನೆ ಹೈದರಾಬಾದ್​ನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರೇ ಬೆರಗಾಗುವಂತಹ ಪ್ರಸಂಗ ಜರುಗಿದೆ.

ಘಟನೆಯ ವಿವರಣೆಗೆ ಬರುವುದಾದರೆ, ಬಿ. ನಾರಾಯಣದಾಸ್​ ಮತ್ತು ಮೋನಿಕಾ ದಾಸ್ ಪಶ್ಚಿಮ ಬಂಗಾಳದ​ ಕೊಲ್ಕತ ಮೂಲದ ದಂಪತಿ. ಜೀವನ ನಿರ್ವಹಣೆಗಾಗಿ ಹೈದರಾಬಾದ್​ಗೆ ಬಂದು ವೆಂಕಟಗಿರಿ ಹತ್ತಿರದ ಯೂಸುಫ್​ಗುಡದಲ್ಲಿ ನೆಲೆಸಿದ್ದರು. ನಾರಾಯಣದಾಸ್​ ಪ್ಲಂಬರ್​ ಆಗಿ ಕೆಲಸ ಮಾಡುತ್ತಿದ್ದ.

ಹೀಗಿರುವಾಗಿ ಪತ್ನಿ ಮೋನಿಕಾ, ಎಂಡಿ ಆಸಿಫ್​ ಎಂಬಾತನ ಜತೆಯಲ್ಲಿ ಕಳೆದು ಒಂದು ವರ್ಷದಿಂದ ನಿರಂತರವಾಗಿ ಫೋನ್​ನಲ್ಲಿ ಮಾತನಾಡುವುದನ್ನು ಗಮನಿಸಿ ಎಚ್ಚರಿಕೆ ನೀಡಿದ್ದ. ಪತಿ-ಪತ್ನಿಯರ ನಡುವೆ ಜಗಳವೂ ನಡೆದು, ಹಿರಿಯರ ಸಮ್ಮುಖದಲ್ಲಿ ಸಂಧಾನವು ಆಗಿತ್ತು.

ಇದೇ ಸಂದರ್ಭದಲ್ಲಿ ಮೋನಿಕಾ ತನ್ನಿಬ್ಬರು ಮಕ್ಕಳೊಂದಿಗೆ ಇದೇ ತಿಂಗಳ 24ರಂದು ಗಂಡನಿಗೂ ಹೇಳದೆ ಕೋಲ್ಕತಗೆ ತೆರಳುತ್ತಾಳೆ. ಇತ್ತ ಪತ್ನಿ ಕಾಣೆಯಾಗಿರುವುದನ್ನು ನೋಡಿ ನಾರಾಯಣದಾಸ್​ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಭಾನುವಾರು ದೂರು ದಾಖಲಿಸುತ್ತಾನೆ. ವೆಂಕಟಗಿರಿ ನಿವಾಸಿ ಆಶಿಪ್, ಪತ್ನಿ ಜತ ಹೋಗಿರುವುದು ತಿಳಿದೇ ನಾರಾಯಣದಾಸ್​ ದೂರು ನೀಡಿರುತ್ತಾನೆ.

ಇದೇ ಸಮಯದಲ್ಲಿ ಜುಬಿಲಿ ಹಿಲ್ಸ್​ ಠಾಣೆಗೆ ಬರುವ ಆಸಿಫ್​ ಪತ್ನಿ, ನನ್ನ ಗಂಡ ಕಾಣಿಸುತ್ತಿಲ್ಲ ಎಂದು ದೂರು ನೀಡುತ್ತಾಳೆ. ಎರಡು ಪ್ರಕರಣಗಳನ್ನು ನೋಡುವ ಪೊಲೀಸರಿಗೆ ಒಂದು ಕ್ಷಣ ಅಚ್ಚರಿಯಾಗುತ್ತದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net