ಮುಸ್ಲಿಂ ಯುವಕನ ಎದೆಯಲ್ಲಿ ಸಿಎಂ ಯೋಗಿ ಟ್ಯಾಟೂ! ಈತನ ಮಾತು ಕೇಳಿದ್ರೆ ಅಚ್ಚರಿ ಖಂಡಿತ

Yogi Tatoo
Published on

ಲಖನೌ: ಪ್ರವಾದಿ ಮುಹಮ್ಮದ್​ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿರುವ ಹೇಳಿಕೆಯಿಂದ ಇಡೀ ದೇಶ ಕೋಮು ದಳ್ಳುರಿಯಲ್ಲಿ ಬೇಯುತ್ತಿರುವ ಈ ಸಂದಿಗ್ಧ ಸಂದರ್ಭದಲ್ಲಿ ಈ ಒಂದು ಸುದ್ದಿ ನಿಮ್ಮ ಮುಖದಲ್ಲಿ ಮಂದಹಾಸ ತರಿಸುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಮುಸ್ಲಿಂ ವಿರೋಧಿ ಎನ್ನುವವರಿಗೂ ಈ ಸುದ್ದಿ ತಕ್ಕ ಉತ್ತರವಾಗಿದೆ.

ಹೌದು. ಯಾಮೀನ್​ ಸಿದ್ದಿಕಿ ಎಂಬ 23 ವರ್ಷದ ಮುಸ್ಲಿಂ ಯುವಕ ತನ್ನ ಎದೆಯ ಮೇಲೆ ಸಿಎಂ ಯೋಗಿ ಆದಿತ್ಯನಾಥ್​ ಭಾವಚಿತ್ರವನ್ನು ಟ್ಯಾಟೂ ಹಾಕಿಕೊಳ್ಳುವ ಮೂಲಕ ತನ್ನ ಅಭಿಮಾನವನ್ನು ಮೆರದಿದ್ದಾನೆ. ಯೋಗಿ ಅವರೇ ನನ್ನ ನೆಚ್ಚಿನ ನಾಯಕ. ನನ್ನ ಆದರ್ಶ ವ್ಯಕ್ತಿ ಅವರು ಎಂದಿರುವ ಸಿದ್ದಿಕಿ​, ಈ ತಿಂಗಳ ಆರಂಭದಲ್ಲಿ ಆಚರಿಸಲಾದ ಯೋಗಿ ಅವರ ಹುಟ್ಟುಹಬ್ಬಕ್ಕೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ವಿಶೇಷ ಉಡುಗೊರೆಯನ್ನು ನೀಡಿದ್ದಾನೆ.

ಅಂದಹಾಗೆ ಸಿದ್ದಿಕಿ ಅವರು ಫರೂಕಾಬಾದ್ ಮತ್ತು ಮೈನ್‌ಪುರಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಪಾದರಕ್ಷೆ ವ್ಯಾಪಾರ ಮಾಡುತ್ತಿದ್ದಾರೆ. ಸಿಎಂ ಯೋಗಿ ಟ್ಯಾಟೂ ಹಾಕಿಸಿಕೊಂಡಾಗಿನಿಂದ ಸ್ನೇಹಿತರು ಮತ್ತು ಬಂಧು-ಬಗಳದವರಿಗೆ ಸಾಕಷ್ಟು ವಿರೋಧಗಳನ್ನು ಎದರಿಸುತ್ತಿದ್ದರೂ, ಯಾವುದಕ್ಕೂ ತಲೆಕೆಡೆಸಿಕೊಳ್ಳುವ ಗೋಜಿಗೆ ಸಿದ್ದಿಕಿ ಹೋಗಿಲ್ಲ.

ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅವರಿಗೆ ಟ್ಯಾಟೂ ತೋರಿಸಬೇಕೆಂಬುದು ನನ್ನ ಆಸೆ. ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶವನ್ನು ಬದಲಾಯಿಸಿದ್ದಾರೆ. ಯಾವುದೇ ತಾರತಮ್ಯ ಮಾಡುತ್ತಿಲ್ಲ. ಎಲ್ಲ ಹಿಂದುಗಳು ಮತ್ತು ಮುಸ್ಲಿಮರು ಯೋಗಿ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸಿದ್ದಿಕಿ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಮತ್ತು ಮಥುರಾ ಈದ್ಗಾದಂತಹ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡಲು ಸಿದ್ದಿಕಿ ಅವರು ಇದೇ ಸಂದರ್ಭದಲ್ಲಿ ನಿರಾಕರಿಸಿದರು. ಈ ವಿಚಾರಗಳು ನ್ಯಾಯಾಲಯದಲ್ಲಿದ್ದು, ಅಲ್ಲಿಯೇ ನಿರ್ಧಾರವಾಗುತ್ತದೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net