ಮೋದಿಜೀ ನಿಮಗೆಷ್ಟು ಭಯವಿದೆ? ನ್ಯಾಯಕ್ಕಾಗಿ ಧ್ವನಿಯೆತ್ತಿದಕ್ಕೆ ಟ್ವಿಟರ್​ ಖಾತೆ ಲಾಕ್ ಎಂದ ಕಾಂಗ್ರೆಸ್​

Congress
Published on

ನವದೆಹಲಿ: ಪಕ್ಷದ ಅಧಿಕೃತ ಖಾತೆಯನ್ನು ಟ್ವಿಟರ್​ ಲಾಕ್​ ಮಾಡಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಫೇಸ್​ಬುಕ್​ ಮೂಲಕ ಗುರುವಾರ ತಿಳಿಸಿದೆ. ​

ಟ್ವಿಟರ್​ ಖಾತೆ ಲಾಕ್​ ಆಗಿರುವ ಸ್ಕ್ರೀನ್​ ಶಾಟ್​ ಅನ್ನು ಫೇಸ್​ಬುಕ್​ನಲ್ಲಿ ಕಾಂಗ್ರೆಸ್​ ಶೇರ್​ ಮಾಡಿಕೊಂಡಿದೆ. ಈ ಖಾತೆಯು ಟ್ವಿಟರ್​ ನಿಯಮ ಉಲ್ಲಂಘಿಸಿದೆ ಎಂದು ನಮಗೆ ಖಚಿತವಾಗಿದೆ. ಖಾಸಗಿ ಮಾಹಿತಿಯನ್ನು ಪೋಸ್ಟ್​ ಮಾಡುವ ಮೂಲಕ ನಮ್ಮ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನೀವು ಇತರರ ಖಾಸಗಿ ಮಾಹಿತಿಯನ್ನು ಅವರ ಅಧಿಕೃತ ದೃಢೀಕರಣ ಮತ್ತು ಅನುಮತಿಯಿಲ್ಲದೆ ಪ್ರಕಟಿಸಬಾರದು ಅಥವಾ ಪೋಸ್ಟ್ ಮಾಡಬಾರದು ಎಂದು ಕಾಂಗ್ರೆಸ್​ ಶೇರ್​ ಮಾಡಿಕೊಂಡಿರುವ ಪೋಸ್ಟ್​ನಲ್ಲಿ ಉಲ್ಲೇಖವಾಗಿದೆ.

ಸ್ಕ್ರೀನ್​ ಶಾಟ್​​ ಶೇರ್​ ಮಾಡಿಕೊಂಡು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​, ನಮ್ಮ ನಾಯಕರುಗಳನ್ನು ಜೈಲಿನಲ್ಲಿಟ್ಟಗಾಲೇ ನಾವು ಹೆದರಲಿಲ್ಲ, ಇನ್ನು ನಮ್ಮ ಟ್ವಿಟರ್​ ಖಾತೆಯನ್ನು ಲಾಕ್​ ಮಾಡಿದ್ರೆ ಹೆದರುತ್ತೇವಾ? ನಾವು ಕಾಂಗ್ರೆಸ್ಸಿಗರು. ನಾವು ಹೋರಾಡುತ್ತೇವೆ... ಹೋರಾಡುತ್ತಲೇ ಇರುತ್ತೇವೆ ಎಂದು ಕಾಂಗ್ರೆಸ್​ ಹೇಳಿದೆ.

9 ವರ್ಷದ ದಲಿತ ಹುಡುಗಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಸಿ, ಅಪರಾಧಗಳು ಮತ್ತು ಸಂತ್ರಸ್ತರ ನ್ಯಾಯಕ್ಕಾಗಿ ಧ್ವನಿಯೆತ್ತಿದಕ್ಕೆ ಖಾತೆ ಲಾಕ್​ ಮಾಡಲಾಗಿದೆ ಎಂದು ಆರೋಪಿಸಿದೆ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ಧ್ವನಿ ಎತ್ತುವುದು ಅಪರಾಧವಾಗಿದ್ದರೆ, ನಾವು ಈ ಅಪರಾಧವನ್ನು ನೂರು ಬಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದೆ. ಅಲ್ಲದೆ, ಮೋದಿ ಜಿ ನಿಮಗೆಷ್ಟು ಭಯವಿದೆ? ಎಂದು ಕಾಂಗ್ರೆಸ್​ ಪ್ರಧಾನಿ ಮೋದಿಯವರನ್ನು ಕುಟುಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net