ಮಲತಾಯಿಯನ್ನೇ ಮದ್ವೆಯಾದ ಮಗ​: ಇವರಿಬ್ಬರ ಅಹಸ್ಯ ಕೆಲಸಕ್ಕೆ ನೊಂದ ತಂದೆಯ ಗೋಳಾಟ ನೋಡಲಾಗ್ತಿಲ್ಲ!

Marriage
Published on

ನವದೆಹಲಿ: ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಚಿಕ್ಕಮ್ಮ ಆಗಿರಲಿ ಅಥವಾ ದೊಡ್ಡಮ್ಮ ಆಗಿರಲಿ ಅವರು ಮಾತೃ ಸಮಾನರು. ಆದರೆ, ಇಲ್ಲೊಬ್ಬ ಯುವಕ ತನ್ನ ಮಲತಾಯಿಯ ಜೊತೆ ಓಡಿ ಹೋಗಿದ್ದು, ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ನೊಂದ ವ್ಯಕ್ತಿ, ನನ್ನ ಮಗ ನನ್ನ ಎರಡನೇ ಹೆಂಡತಿಯ ಜತೆ ಓಡಿ ಹೋಗಿದ್ದು ನ್ಯಾಯ ದೊರಕಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.

ಈ ಘಟನೆ ಉತ್ತರಾಖಂಡದ ಬಜ್ಪುರ್​ ಜಿಲ್ಲೆಯಲ್ಲಿ ನಡೆದಿದೆ. ಇಂದ್ರರಾಮ್​ ಎಂಬಾತ ಮಗನ ವಿರುದ್ಧವೇ ದೂರು ನೀಡಿದ್ದಾನೆ. ನನ್ನ ಎರಡನೇ ಹೆಂಡತಿ ಬಾಬ್ಲಿ ಜತೆ ನನ್ನ ಪುತ್ರ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾನೆ.

ಇಂದ್ರಾರಾಮ್​ ಮೊದಲ ಪತ್ನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಬಾಬ್ಲಿಯನ್ನು ಮದುವೆಯಾಗಿ 11 ವರ್ಷ ಕಳೆದಿವೆ. ಮೊದಲ ಹೆಂಡತಿಯ ಪುತ್ರ ನಿತ್ಯವು ಮನೆಗೆ ಬರುತ್ತಿದ್ದನಂತೆ. ಹಿಂದಿನ ದಿನ ಮನೆಗೆ ಹೋಗುವುದಾಗಿ ಹೇಳಿದ್ದ ಬಾಬ್ಲಿ ವಾಪಸ್ ಬಂದಿರಲಿಲ್ಲ. ಬಳಿ ವಿಚಾರಣೆ ನಡೆಸಿದಾಗ ಬಾಬ್ಲಿ, ಇಂದ್ರರಾಮ್​ ಮೊದಲ ಪುತ್ರನ ಜತೆ ಮದುವೆಯಾಗಿರುವ ವಿಚಾರ ಗೊತ್ತಾಗಿದೆ.

ಮನೆಯಿಂದ ಹೋಗುವಾಗ ಬಾಬ್ಲಿ 20 ಸಾವಿರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ಇಂದ್ರರಾಮ್​ ಆರೋಪಿಸಿದ್ದಾನೆ. ಪತಿಯೊಂದಿಗೆ ಹಿಂತಿರುಗಲು ನಿರಾಕರಿಸಿದ ಕಾರಣ ಮಾತಿನ ಚಕಮಕಿ ನಡೆದಿದ್ದು, ಇಂದ್ರರಾಮ್ ಗಾಯಗೊಂಡಿದ್ದಾರೆ. ಪತ್ನಿ ಮತ್ತು ಮಗನೇ ಇಂತಹ ನೀಚ ಕೃತ್ಯ ಮಾಡಿರುವುದನ್ನು ನೋಡಿ ನೊಂದುಕೊಂಡಿರುವ ಇಂದ್ರರಾಮ್​ ಗೋಳಾಡುತ್ತಿದ್ದಾನೆ. ಇಬ್ಬರು ಇದೀಗ ನಾಪತ್ತೆಯಾಗಿದ್ದು, ಪೊಲೀಸರಿಗೆ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net