

ಮೆಹಬೂಬ್ನಗರ: ಮದುವೆ ಮಾಡಲು ವರನ ಹುಡುಕಾಟದಲ್ಲಿರುವ ಸಂದರ್ಭದಲ್ಲಿ ಪಾಲಕರು ತನಗಿಷ್ಟವಿಲ್ಲದ ಮದುವೆ ಮಾಡಿಬಿಡುತ್ತಾರೆಂಬ ಬೇಸರದಿಂದ ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಮೆಹಬೂಬ್ನಗರದಲ್ಲಿ ನಡೆದಿದೆ.
ಸುನಿತಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಮೆಹಬೂಬ್ನಗರ ಜಿಲ್ಲೆಯ ಚಿನ್ನಚಿಂತಕುಂಟ ವಲಯದ ಮದ್ದೂರ್ ಗ್ರಾಮದ ನಿವಾಸಿ. ಸುನಿತಾಗೆ ಮದುವೆ ಮಾಡಲು ಆಕೆಯ ಪಾಲಕರು ವರನ ಹುಡುಕಾಟದಲ್ಲಿ ಇದ್ದರು. ಇನ್ನು ಕೆಲವೇ ದಿನಗಳಲ್ಲಿ ಮದುವೆ ಬಿಡುತ್ತಾರೆಂಬ ಭಯದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಷ ಸೇವಿಸಿದ್ದನ್ನು ಮನಗಂಡು ಪಾಲಕರು ತಕ್ಷಣ ಸುನಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೋಮಾಗೆ ಜಾರಿದ್ದ ಸುನಿತಾ ಆಸ್ಪತ್ರೆಗೆ ದಾಖಲಿಸಿದ ದಿನವೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.
ಈ ಸಂಬಂಧ ಶುಕ್ರವಾರ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)