

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಅಸಂಖ್ಯಾತ ವಿಡಿಯೋಗಳು ಪ್ರತಿದಿನ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ. ಎಲ್ಲ ವಿಡಿಯೋಗಳು ನೋಡುಗರಿಗೆ ಇಷ್ಟವಾಗುವುದಿಲ್ಲ. ಆದರೆ, ಕೆಲವೊಮ್ಮೆ ಕೆಲವೊಂದು ನೆಟ್ಟಿಗರ ಹೃದಯವನ್ನು ಮುಟ್ಟಿಬಿಡುತ್ತದೆ. ಎಷ್ಟರಮಟ್ಟಿಗೆ ಅಂದ್ರೆ ಆ ವಿಡಿಯೋ ಕೋಟಿ ಕೋಟಿ ವೀಕ್ಷಣೆ ಗಿಟ್ಟಿಸಿಕೊಳ್ಳುತ್ತದೆ.
ಇದೇ ರೀತಿ ಪುಟ್ಟ ಮಗುವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕತಾರ್ ಹಮಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುಟ್ಟ ಹುಡುಗಿ ಭದ್ರತಾ ಸಿಬ್ಬಂದಿ ಅನುಮತಿ ಕೇಳಿದ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ವಿಮಾನ ನಿಲ್ದಣದಲ್ಲಿರುವ ರಕ್ಷಣಾ ಸಿಬ್ಬಂದಿಯ ಬಳಿ ತೆರಳುವ ಪುಟ್ಟ ಬಾಲಕಿ ವಿಮಾನದಲ್ಲಿ ಹೊರಡಲು ರೆಡಿಯಾಗಿದ್ದ ತನ್ನ ಆಂಟಿಯನ್ನು ಕೊನೆಯದಾಗಿ ಅಪ್ಪಿಕೊಳ್ಳಲು ಅನುಮತಿ ಕೇಳುತ್ತದೆ. ಬಳಿಕ ಆಂಟಿಯ ಬಳಿ ಓಡಿ ಹೋಗಿ ತಬ್ಬಿಕೊಳ್ಳುತ್ತದೆ. ಈ ವಿಡಿಯೋವನ್ನು ಕಪ್ತಾನ್ ಹಿಂದೂಸ್ಥಾನ್ ಟ್ವಿಟರ್ನಲ್ಲಿ ಶೇರ್ ಆಗಿದ್ದು, ಭಾರೀ ವೈರಲ್ ಆಗಿದೆ.
ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ವಿಡಿಯೋ ಗಿಟ್ಟಿಸಿಕೊಂಡಿದೆ. 36 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ಪುಟ್ಟ ಬಾಲಕಿಯ ಮುಗ್ಧತೆಗೆ ನೆಟ್ಟಿಗರು ಫಿದಾ ಆಗಿದ್ದು, ಮನಮುಟ್ಟುವ ವಿಡಿಯೋವನ್ನು ತಮ್ಮ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)