ಮದ್ವೆ ಆಗಿ ಕೇವಲ 3 ತಿಂಗಳಾಗಿದ್ರೂ ಆನ್​ಲೈನ್​ನಲ್ಲಿ ಅಪ್ರಾಪ್ತೆಗೆ ಬಲೆ ಬೀಸಿದ ಯುವಕ: ಮುಂದಾಗಿದ್ದು ದುರಂತ

Kerala Youth
Published on

ತಿರುವನಂತಪುರಂ: ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಕೇರಳದ ಕಜಕ್ಕೂಟಮ್​ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಚಾರಿಟಿ ಕೆಲಸದ ಮೇಲೆ ಇನ್​ಸ್ಟಾಗ್ರಾಂ ಮೂಲಕ ಬಾಲಕಿಯನ್ನು ಆರೋಪಿ ಸಂಪರ್ಕಿಸಿದ್ದ. ಬಂಧಿತನನ್ನು ಅಖಿನೇಶ್​ ಅಶೋಕ್​ ಎಂದು ಗುರುತಿಸಲಾಗಿದೆ. ಈತ ಮುತ್ತಾಥರಾ ನಿವಾಸಿ.

ಆರೋಪಿ ಅಶೋಕ್​ ಮೂರು ತಿಂಗಳ ಹಿಂದೆಯೇ ಬೇರೊಂದು ಮದುವೆ ಆಗಿದ್ದಾನೆ. ಆದರೆ, ಆನ್​ಲೈನ್​ ಮೂಲಕ ಮತ್ತೊಂದು ಯುವತಿಯ ಸಂಪರ್ಕವನ್ನು ಅಶೋಕ್​ ಸಾಧಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2020ರ ಸೆಪ್ಟೆಂಬರ್​ನಿಂದ ಅನೇಕ ಬಾರಿ ಅಪ್ರಾಪ್ತೆಯನ್ನು ಆರೋಪಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿ ಆಗಿರುವ ಅಪ್ರಾಪ್ತೆಯನ್ನು ಆಶ್ರಯ ಮನೆಯಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ.

ಅಪ್ರಾಪ್ತೆಯು ತನ್ನ ತಾಯಿ, ಮಲತಂದೆ ಮತ್ತು ಅಜ್ಜಿಯ ಜತೆ ವಾಸವಿದ್ದಳು. ಆಕೆಯ ತಾಯಿ ಕುಟುಂಬವನ್ನು ಬಿಟ್ಟು ಬೇರೋಬ್ಬನನ್ನು ಮದುವೆಯಾಗಿದ್ದಾರೆ. ಅಜ್ಜಿ ಮನೆಯಲ್ಲಿ ಇರುವಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net