VIDEO| ಹಾಟ್​ ವಿಡಿಯೋ ಹರಿಬಿಟ್ಟು ನೆಟ್ಟಿಗರ ಟೀಕೆಗೆ ಗುರಿಯಾದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್​!

Priya Prakash
Published on

ಕೊಚ್ಚಿ: ಕೇವಲ ಕಣ್ಸನ್ನೆಯಿಂದಲೇ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿ ಅಪಾರ ಅಭಿಮಾನಿ ಬಳಗವನ್ನೇ ತನ್ನತ್ತ ಸೆಳೆದಿರುವ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್​ ವಾರಿಯರ್​ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ತಮ್ಮ ಮಾದಕ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುವ ಪ್ರಿಯಾ ಇದೀಗ ಮತ್ತೊಮ್ಮೆ ತಮ್ಮ ಸೆಕ್ಸಿ ಲುಕ್​ ಅನಾವರಣ ಮಾಡಿದ್ದಾರೆ.

ಪ್ರಿಯಾ ವಾರಿಯರ್​ ನಿನ್ನೆ (ಜುಲೈ 20) ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ನಟ ಹಾಗು ಡಾನ್ಸರ್ ರಂಜಾನ್​ ಜೊತೆ ತಮಿಳಿನ ಸೂಪರ್​ ಹಿಟ್​ "96" ಚಿತ್ರದ ಹಾಡಿದ ಪ್ರಿಯಾ ಸಿಕ್ಕಾಪಟ್ಟೆ ಹಾಟ್​ ಆಗಿ ಸೊಂಟ ಬಳುಕಿಸಿದ್ದಾರೆ.

ಈ ರೊಮ್ಯಾಂಟಿಕ್​ ಹಾಡಿನ ಡಾನ್ಸ್​ ವಿಡಿಯೋವನ್ನು ಬೆಡ್​ರೂಮ್​ ಒಳಗೆ ಶೂಟ್​ ಮಾಡಲಾಗಿದೆ. ವಿಡಿಯೋ ಶೇರ್​ ಮಾಡಿಕೊಂಡಿರುವ ಪ್ರಿಯಾ, ಅತ್ಯಂತ ಪ್ರತಿಭಾವಂತ ಹುಡುಗನ ಜೊತೆ ನನ್ನ ಆಲ್​ ಟೈಮ್​ ಫೇವರಿಟ್= ಮ್ಯಾಜಿಕ್​ ಎಂದು ಅಡಿಬರಹ ನೀಡಿದ್ದಾರೆ. ಈ ಶೂಟಿಂಗ್​ ಮೂಲಕ ಒಳ್ಳೆಯ ಸಮಯವನ್ನು ಹೊಂದಿದೆ ಎಂದು ಪ್ರಿಯಾ ಹೇಳಿಕೊಂಡಿದ್ದಾರೆ.

ಈ ವಿಡಿಯೋ ಪೋಸ್ಟ್​ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಕೆಲವರು ರೊಮ್ಯಾಂಟಿಕ್​ ದೃಶ್ಯದಲ್ಲಿ ಪ್ರಿಯಾ ಅವರು ಧರಿಸಿರುವ ಉಡುಗೆಯನ್ನು ಟೀಕಿಸಿದ್ದಾರೆ. ಇನ್ನು ಕೆಲವರು ಪ್ರಿಯಾ ಅವರ ಹಾಟ್​ನೆಸ್​ಗೆ ಬೋಲ್ಡ್​ ಆಗಿದ್ದು, ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

ಅಂದಹಾಗೆ ಪ್ರಿಯಾ ಅವರು ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 7 ಮಿಲಿಯನ್ಸ್​ ಫಾಲೋವರ್ಸ್​ ಹೊಂದಿದ್ದು, ಘಟಾನುಘಟಿ ನಾಯಕರನ್ನೇ ಹಿಂದಿಕ್ಕಿದ್ದಾರೆ. ಹೀಗಿರುವಾಗ ಕರೊನಾ ಲಾಕ್​ಡೌನ್​ ಸಮಯದಲ್ಲಿ ಅಂದರೆ ಜೂನ್​ನಲ್ಲಿ ಇನ್​ಸ್ಟಾಗ್ರಾಂಗೆ ಗುಡ್​ಬೈ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಕೆಲ ದಿನಗಳ ಬಳಿಕ ಮತ್ತೆ ಜಾಲತಾಣಕ್ಕೆ ಪ್ರವೇಶ ಪಡೆದ ಪ್ರಿಯಾ, ಮಾನಸಿಕ ಆರೋಗ್ಯ ದೃಷ್ಟಿಯಿಂದ ಕೊಂಚ ವಿರಾಮ ಪಡೆದುಕೊಂಡಿದ್ದಾಗಿ ಹೇಳಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಪ್ರಿಯಾ, ಕನ್ನಡದಲ್ಲಿ ವಿಷ್ಣುಪ್ರಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಶ್ರೀದೇವಿ ಬಂಗಲೋ ಚಿತ್ರದಲ್ಲಿ ಬಾಲಿವುಡ್​ ಎವರ್​ ಗ್ರೀನ್​ ಬ್ಯೂಟಿ ದಿವಂಗತ ಶ್ರೀದೇವಿ ಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net