ತುತ್ತು ಅನ್ನಕ್ಕೂ ಪರದಾಡ್ತಿದ್ದ ಬಡಕುಟುಂಬದ ಯುವಕ ಕೋಟಿಯ ಕೋಟೆ ಕಟ್ಟಿದ ಸ್ಫೂರ್ತಿದಾಯಕ ಕತೆಯಿದು!

Mustafa
Published on

ಮುಂಬೈ: ಉದ್ಯಮದಲ್ಲಿ ಯಶಸ್ಸು ಸಾಧಿಸುವುದು ಅಂದ್ರೆ ಸಮ್ಮನೇ ಅಲ್ಲ. ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದವರೂ ಇದ್ದಾರೆ. ಹಾಗೇ ಎಲ್ಲವನ್ನು ಮೆಟ್ಟಿನಿಂತು ಯಶಸ್ಸಿನ ಶಿಖರವನ್ನೇರಿದ ಛಲಗಾರರು ಇದ್ದಾರೆ. ಅದೇ ರೀತಿಯ ವ್ಯಕ್ತಿಯೊಬ್ಬರನ್ನು ನಾವಿಂದು ಪರಿಚಯ ಮಾಡಿಕೊಡ್ತಿವಿ ಮುಂದುದೆ ಓದಿ.

ಬಡಕುಟುಂಬದಲ್ಲಿ ಹುಟ್ಟಿದ ಯುವಕನೊಬ್ಬ ಇಂದು ಕೋಟ್ಯಾಂತರ ರೂಪಾಯಿ ಮೌಲ್ಯದ ಕಂಪನಿಯ ಸಿಇಒ ಅಂದರೆ ನೀವು ನಂಬಲೇಬೇಕು. ಆ ವ್ಯಕ್ತಿಯ ಹೆಸರು ಮುಸ್ತಫಾ. ಇವರು ಕೇರಳ ಮೂಲದ ಬಡಕುಟುಂಬದವರು. ಇವರ ತಂದೆ ಕೂಲಿ ಕೆಲಸಗಾರನಾಗಿದ್ದರು. ಆಗಿನ ಕಾಲದಲ್ಲಿ ಮುಸ್ತಫಾಕುಟುಂಬ ಊಟಕ್ಕೂ ಪರದಾಡಿತ್ತು.

ಮುಸ್ತಫಾ ಅವರು 6ನೇ ತರಗತಿಯಲ್ಲಿ ಫೈಲ್​ ಆಗಿ ಓದುವುದನ್ನೇ ನಿಲ್ಲಿಸಿ ದಿನಗೂಲಿ ಕೆಲಸಕ್ಕೆ ಹೋಗಲು ಬಯಸಿದ್ದರು. ಮೊದಲೇ ಬಡವರಾಗಿದ್ದರಿಂದ ಓದಿಸುವುದು ಕುಟುಂಬಕ್ಕೆ ಕಷ್ಟವಾಗಿತ್ತು. ಆದರೆ, ಅದೃಷ್ಟವಶಾತ್​ ಮುಸ್ತಫಾಗೆ ತಮ್ಮ ಟೀಚರ್​ನಿಂದ ಮತ್ತೆ ಶಾಲೆಗೆ ಹೋಗುವ ಅವಕಾಶ ದೊರೆಯಿತು. ಬಳಿಕ ಓದಿನ ಕಡೆ ಗಮನಹರಿಸಿದ ಮುಸ್ತಫಾ ಶಾಲೆಗೆ ಟಾಪರ್​ ಆಗಿ ಹೊರಹೊಮ್ಮಿದರು. ಚೆನ್ನಾಗಿ ಓದಿ ಕೊನೆಗೆ ಒಂದು ಕೆಲಸಕ್ಕೆ ಸೇರಿದ ಮುಸ್ತಫಾ ತನ್ನ ತಂದೆ ಮಾಡಿದ್ದ ಸಾಲವನ್ನೆಲ್ಲ ಮೊದಲು ತೀರಿಸಿದರು. ಒಮ್ಮೆ ವಿದೇಶಕ್ಕೆ ಹೋಗುವ ಅವಕಾಶವೂ ಬಂದಿತ್ತು. ಆದರೆ, ಇರುವ ಕೆಲಸವೇ ಸಾಕು ಅಂತಾ ಅದನ್ನು ಬಿಟ್ಟು ತವರಿನಲ್ಲೇ ಉಳಿದರು.

ಜೀವನ ಸುಗಮವಾಗಿಯೇ ಸಾಗುತ್ತಿತ್ತು. ಆದರೆ, ಕೆಲವು ದಿನಗಳ ನಂತರ ಆರ್ಥಿಕ ಸವಾಲುಗಳನ್ನು ನೋಡಿ ಕೆಲಸಕ್ಕಿಂತ ಏನಾದರೂ ಮಾಡಬೇಕೆಂದು ಮುಸ್ತಫಾ ನಿರ್ಧರಿಸಿದರು. ಒಮ್ಮೆ ತಮ್ಮ ಸಂಬಂಧಿಯೊಂದಿಗೆ ಕುಳಿತು ಮಾತನಾಡುತ್ತಿರುವಾಗ ಮುಸ್ತಫಾಗೆ ಒಂದು ಐಡಿಯಾ ಬರುತ್ತದೆ. ಅದೇನಪ್ಪಾ ಅಂದ್ರೆ ಉತ್ತಮ ಗುಣಮಟ್ಟದ ಇಡ್ಲಿ ಮತ್ತು ದೋಸೆ ಹಿಟ್ಟಿನ ಕಂಪನಿಯನ್ನು ತೆರೆಯಲು ನಿರ್ಧರಿಸುತ್ತಾರೆ. 50 ಸಾವಿರ ರೂ. ಬಂಡವಾಳದೊಂದಿಗೆ ಮುಸ್ತಫಾ ಹೊಸ ವ್ಯವಹಾರವನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಕಂಪನಿಯ ಜವಬ್ದಾರಿಯನ್ನು ತನಗೆ ಗೊತ್ತಿರುವ ವ್ಯಕ್ತಯೊಬ್ಬನಿಗೆ ಮುಸ್ತಫಾ ವಹಿಸುತ್ತಾರೆ ತನ್ನ ಕೆಲಸವನ್ನು ತಾನು ಮುಂದುವರಿಸುತ್ತಾರೆ.

ಹೀಗೆ ವ್ಯವಹಾರ ಉತ್ತಮವಾಗಿ ನಡೆಯುತ್ತಿರುವಾಗ ಉದ್ಯಮದ ಮೇಲೆ ಸಂಪೂರ್ಣ ತನ್ನ ಗಮನವನ್ನು ಕೇಂದ್ರೀಕರಿಸಲು ಮೂರು ವರ್ಷಗಳ ಬಳಿಕ ಮುಸ್ತಫಾ ಕೆಲಸವನ್ನು ಬಿಡುತ್ತಾರೆ. ಆರಂಭದಲ್ಲಿ ತುಂಬಾ ಕಷ್ಟವಾಯಿತು. ತನ್ನ ಕಂಪನಿಯ ಉದ್ಯೋಗಿಗಳಿಗೂ ಸಂಬಳ ಕೊಡಲು ಕಷ್ಟವಾಯಿತು. ಆದರೂ ತನ್ನ ತಾಳ್ಮೆ ಕಳೆದುಕೊಳ್ಳದ ಮುಸ್ತಫಾ ಉದ್ಯಮವನ್ನು ಹಾಗೇ ಮುಂದುವರಿಸಿದರು ಸುಮಾರು 8 ವರ್ಷಗಳ ಅನೇಕ ಏರಿಳಿತಗಳ ನಡುವೆ ಕೊನೆಗೂ ಮುಸ್ತಫಾ ಯಶಸ್ಸಿನ ಶಿಖರವನ್ನು ಮುಟ್ಟಿದ್ದಾರೆ.

ಅಂತಿಮವಾಗಿ ತನ್ನ ಕಂಪನಿಗೆ ದೊಡ್ಡ ಹೂಡಿಕೆದಾರನನ್ನು ಕಂಡುಕೊಂಡಿರುವ ಮುಸ್ತಫಾ ಐಡಿ ಫ್ರೆಶ್ ಫುಡ್ ಕಂಪನಿಯಲ್ಲಿ 2000 ಕೋಟಿ ಹೂಡಿಕೆಯೊಂದಿಗೆ ತನ್ನ ಕಂಪನಿಯ ಸ್ವರೂಪವನ್ನೇ ಬದಲಾಯಿಸಿದ್ದಾರೆ. ಕಂಪನಿಯು ವಿಸ್ತರಿಸಿದಂತೆ, ಮಾರಾಟವೂ ಹೆಚ್ಚಾಗಿದೆ. ತನ್ನ ಕಂಪನಿಯಲ್ಲಿ ಉದ್ಯೋಗಿಗಳನ್ನು ಸಹ ಮಿಲಿಯನೇರ್‌ಗಳನ್ನಾಗಿ ಮಾಡಿದ್ದಾರೆ. ಅವರ ಕಂಪನಿಯಲ್ಲಿ ಪ್ರಸ್ತುತ ನೂರಾರು ಜನರು ಕೆಲಸ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net