ಗಂಡು ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಕರೊನಾಗೆ ಬಲಿಯಾದ ಬಿಜೆಪಿ ಕಾರ್ಪೊರೇಟರ್​ ಮಗಳು

BJP Daughter
Published on

ಹೈದರಾಬಾದ್​: ಮಹಾಮಾರಿ ಕರೊನಾ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವ ಸಮೂಹವೇ ಬಲಿಯಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ಕರೊನಾ ತೀವ್ರತೆ ಹೆಚ್ಚಾಗಿದ್ದು ದಿನೇದಿನೆ ಪ್ರಕರಣಗಳ ಏರಿಕೆ ಜತೆಗೆ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ.

ಕರೊನಾಗೆ ಹೈದರಾಬಾದ್​ನ ಗುಡಿ ಮಲ್ಕಾಪುರ್​ ಕ್ಷೇತ್ರದ ಬಿಜೆಪಿ ಕಾರ್ಪೊರೇಟರ್​ ದೇವ್​ ಕರುಣಾಕರ್ ಅವರ ಮಗಳು ಭವಾನಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಮದುವೆ ಆಗಿರುವ ಭವಾನಿ ಏಪ್ರಿಲ್​ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಕರೊನಾಗೆ ಬಲಿಯಾಗಿದ್ದಾರೆ.

ಹೆರಿಗೆಗೆ ದಾಖಲಾಗಿದ್ದ ಆಸ್ಪತ್ರೆಯಲ್ಲೇ ಕರೊನಾ ಸೋಂಕು ಅಂಟಿದೆ ಎಂದು ಸಂಶಯ ವ್ಯಕ್ತವಾಗುತ್ತಿದೆ. ಸೋಂಕಿನ ತೀವ್ರತೆ ಹೆಚ್ಚಾಗಿ ಕಳೆದ 5 ದಿನಗಳಿಂದ ಭವಾನಿ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಅತ್ತ ಏನು ಅರಿಯದ ಹಸುಗೂಸು ಹುಟ್ಟಿದ ಬೆನ್ನಲ್ಲೇ ತಾಯಿಯನ್ನು ಕಳೆದಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net