

ಮುಂಬೈ: ಹೋಟೆಲ್ ಒಂದರಲ್ಲಿ ಕ್ವಾರಂಟೈನ್ನಲ್ಲಿದ್ದ ಕೋವಿಡ್ ರೋಗಿಯನ್ನು ಮಂಚಕ್ಕೆ ಕರೆದ ವೈದ್ಯಕೀಯ ಸಂಯೋಜಕನನ್ನು ಬಂಧಿಸಿರುವ ಘಟನೆ ಮುಂಬೈನ ಅಂಧೇರಿ ಉಪನಗರದಲ್ಲಿ ಬುಧವಾರ ನಡೆದಿದೆ.
ವೈದ್ಯಕೀಯ ಸಂಯೋಜಕನ ಹಿಂಸೆಯನ್ನು ತಾಳಲಾರದೇ ಸಂತ್ರಸ್ತೆ ಸೋಮವಾರ ಮುಂಬೈ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕರೊನಾ ವೈರಸ್ ಪಾಸಿಟಿವ್ ಬಳಿಕ ಸಂತ್ರಸ್ತೆ ಅಂಧೇರಿಯ ಎಂಐಡಿಸಿ ಏರಿಯಾದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ನಲ್ಲಿದ್ದರು. ಈ ವೇಳೆ ಆರೋಗ್ಯ ವಿಚಾರಿಸಲು ಅಲ್ಲಿಗೆ ಬರುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದಲ್ಲದೆ, ಸೆಕ್ಸ್ಗೆ ಸಹಕರಿಸು ಎಂದು ಒತ್ತಾಯಿಸುತ್ತಿದ್ದ ಎಂದು ಆರೋಪಿಸಿದ್ದಾಳೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಅಪರಾಧದ ಒತ್ತಡ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ, 14 ದಿನಗಳ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)