ಸುಲಿಗೆ ಕೇಸ್​ನಲ್ಲಿ ಬಂಧಿಯಾದ ಗ್ಯಾಂಗ್​ಸ್ಟರ್​ ಗರ್ಲ್​ಫ್ರೆಂಡ್​​ ಹಿನ್ನೆಲೆ ಕೇಳಿದ್ರೆ ದಂಗಾಗ್ತೀರಾ..!

Manasi
Published on

ಕಟಕ್​: ಒಡಿಶಾದ ಬಿಲ್ಡರ್​ ಒಬ್ಬರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಗ್ಯಾಂಗ್​​ಸ್ಟರ್​ ಸಕಿಲ್​ ಗರ್ಲ್​ಫ್ರೆಂಡ್​ ಮಾನಸಿ ನಾಯಕ್​ ಅಲಿಯಾಸ್​ ಬೇಬಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕಟಕ್​ನ ವಿವಿಧ ಪೊಲೀಸ್​ ಠಾಣೆಗಳಲ್ಲಿ ಬೇಬಿ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳು ಬಾಕಿ ಇವೆ. 2015ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಗ್ಯಾಂಗ್​​ಸ್ಟರ್​ ಸಕಿಲ್ ಪರಿಚಯವಾಗಿ ಅವನ ಪರವಾಗಿ ಕೆಲಸ ಮಾಡುತ್ತಿದ್ದಳು.​ ಸಕಿಲ್​ ಜೈಲು ಪಾಲಾದರೂ ಅಲ್ಲಿಯೇ ಕುಳಿತು ಬೇಬಿ ಮೂಲಕ ತನ್ನ ಕ್ರಮಿನಿಲ್​ ಕೆಲಸಗಳನ್ನು ಮಾಡಿಸುತ್ತಿದ್ದ.

ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಬೇಬಿ ಮೇಲೆ ಕಳೆದ ಕೆಲವು ತಿಂಗಳಿಂದ ಪೊಲೀಸರು ಕಣ್ಣಿಟ್ಟಿದ್ದರು. ಇದೀಗ ಬಿಲ್ಡರ್​ ಒಬ್ಬರು ಆಕೆಯ ವಿರುದ್ಧ ದೂರು ನೀಡಿದ್ದು, ಇದೇ ಆಧಾರದ ಮೇಲೆ ಬೇಬಿ ಸೇರಿದಂತೆ ಆಕೆಯ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವಾರ ಕಟಕ್​ನ ಶಿಶುಭಬ್ಯಾನ್​ ಏರಿಯಾದಲ್ಲಿ ದೂರುದಾರ ಬಳಿ ಸುಲಿಗೆ ಮಾಡಿದ ಆರೋಪವನ್ನು ಬೇಬಿ ಎದುರಿಸುತ್ತಿದ್ದಾಳೆ. ಇದಕ್ಕೂ ಮುನ್ನ ಗ್ಯಾಂಗ್​ಸ್ಟರ್​ ಸಕಿಲ್​ನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net