ಬೋಗಿಯಿಂದ ಬೇರ್ಪಟ್ಟ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಇಂಜಿನ್​: ಸ್ವಲ್ಪದರಲ್ಲೇ ತಪ್ಪಿದ ಅನಾಹುತ

Rail
Published on

ವಿಶಾಖಪಟ್ಟಣ: ಚಲಿಸುತ್ತಿರುವಾಗ ಎಕ್ಸ್‌ಪ್ರೆಸ್ ರೈಲಿನ ಇಂಜಿನ್, ತನ್ನ ಬೋಗಿಯಿಂದ ಬೇರ್ಪಟ್ಟು, ಸುಮಾರು ಒಂದು ಕಿ.ಮೀ ಹೆಚ್ಚು ದೂರ ಹಾಗೇ ಕ್ರಮಿಸಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.

ವಿಶಾಖಪಟ್ಟಣಂ-ನಿಜಾಮುದ್ದೀನ್ ಸಮತಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12807) ಬುಧವಾರ ಬೆಳಗ್ಗೆ ಆಂಧ್ರಪ್ರದೇಶದ ಪಾರ್ವತಿಪುರಂ ಜಿಲ್ಲೆಯ ಸೀತಾನಗರಂ ಮಂಡಲದ ಗುಚಿಮಿ ಗ್ರಾಮದ ಮೂಲಕ ಚಲಿಸುತ್ತಿದ್ದಾಗ ಈ ಆತಂಕಕಾರಿ ಘಟನೆ ನಡೆದಿದೆ.

ಪ್ಯಾಸೆಂಜರ್​ ರೈಲು ಸುಮಾರು ಒಂದು ಕಿ.ಮೀ ಅಧಿಕ ದೂರ ಇಂಜಿನ್​ ಇಲ್ಲದೇ ಸಾಗಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಮನೆ ಮಾಡಿತ್ತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಇಂಜಿನ್​ನಿಂದ ಬೇರ್ಪಟ್ಟ ಬೋಗಿಗಳನ್ನು ನಿಲ್ಲಿಸಿದ ನಂತರ ಮತ್ತೆ ಅದೇ ಇಂಜಿನ್​ ಜೋಡಿದಿ ರೈಲು ಪ್ರಯಾಣವನ್ನು ಪುನರಾರಂಭಿಸಿದರು.

ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net