ಬಾಕಿ 1 ರೂಪಾಯಿ ಕೇಳಿದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಹೈಡ್ರಾಮ ಸೃಷ್ಟಿಸಿದ ಬಸ್​ ಕಂಡಕ್ಟರ್!​

Bus Conductor
Published on

ತಿರುವನಂತಪುರಂ: ಬಾಕಿ ಒಂದು ರೂಪಾಯಿ ಕೇಳಿದ್ದಕ್ಕೆ ಬಸ್​ ಕಂಡಕ್ಟರ್​ ಪ್ರಯಾಣಿಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಕೇರಳದ ಪೆರೂರ್ಕಡದಲ್ಲಿ ನಡೆದಿದೆ.

ಸಂತ್ರಸ್ತ ಪ್ರಯಾಣಿಕನನ್ನು ಕಲ್ಲಂಬಳಂ ಮೂಲದ ಶಿರಾಸ್ ಎಂದು ಗುರುತಿಸಲಾಗಿದೆ. ಹೊಡೆತ ತಿಂದ ಶಿರಾಸ್​ಗೂ ಮುನ್ನವೇ ಕಂಡಕ್ಟರ್​ ಆತನ ವಿರುದ್ಧ ದೂರು ದಾಖಲಿಸಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಡ್ರಾಮಾ ಮಾಡಿದ್ದಾನೆ.

ಬಾಕಿ ಹಣ ಕೇಳಿದ್ದಕ್ಕೆ ಇತರೆ ಪ್ರಯಾಣಿಕರ ಎದುರಲ್ಲೇ ಶಿರಾಸ್​ ಮೇಲೆ ಕಂಡಕ್ಟರ್​ ಹಲ್ಲೆ ಮಾಡಿದ್ದಾರೆ. ಈ ಘಟನೆ ಒಂದು ದಿನದ ಹಿಂದೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಕಂಡಕ್ಟರ್​ ವಿರುದ್ಧ ದೂರು ದಾಖಲಿಸಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದಾಗ ಆರೋಪಿ ಕಂಡಕ್ಟರ್​ ಕೂಡ ಸಂತ್ರಸ್ತ ಶಿರಾಸ್​ ವಿರುದ್ಧ ದೂರು ದಾಖಲಿಸಿದ್ದಾನೆ. ಎರಡು ಕಡೆ ದೂರು ದಾಖಲಾಗಿರುವುದರಿಂದ ಗೊಂದಲಕ್ಕೀಡಾಗಿರುವ ಪೊಲೀಸರು ಸಹ ಪ್ರಯಾಣಿಕರ ಹೇಳಿಕೆ ಪಡೆದುಕೊಂಡಿದ್ದಾರೆ.

ಮೇಲ್ನೋಟಕ್ಕೆ ಕಂಡಕ್ಟರ್​ನದ್ದೇ ತಪ್ಪು ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net