ಇದೆಂಥಾ ವಿಸ್ಮಯ! ಆಮ್ಲೆಟ್​ ಹಾಕಲು ಮೊಟ್ಟೆ ಹೊಡೆದ ಹೋಟೆಲ್​ ಮಾಲೀಕನಿಗೆ ಕಾದಿತ್ತು ಶಾಕ್​

Egg in egg
Published on

ವಿಜಯವಾಡ: ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಆಂಧ್ರ ಪ್ರದೇಶದ ನಗರಿ ಮುನ್ಸಿಪಾಲಿಟಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ಸಾಮಾನ್ಯವಾಗಿ ಮೊಟ್ಟೆಯನ್ನು ಹೊಡೆದಾಗ ಒಳಗೆ ಹಳದಿ ಲೋಳೆ ಮತ್ತು ಅದರ ಸುತ್ತ ಬಿಳಿ ಲೋಳೆ ಇರುತ್ತದೆ. ಆದರೆ, ಮೊಟ್ಟೆ ಒಳಗಡೆ ಮೊಟ್ಟೆ ಇರುವುದನ್ನು ಎಂದಾದರೂ ಗಮನಿಸಿದ್ದೀರಾ? ಈ ಪ್ರಶ್ನೆಗೆ ಬಹುತೇಕ ಇಲ್ಲ ಅಂತಾನೇ ಉತ್ತರ ನೀಡುತ್ತಾರೆ. ಆದರೆ, ನಗರಿ ಪಟ್ಟಣದಲ್ಲಿ ಇದು ನಡೆದಿದೆ.

ನಗರಿಯ ಬಸ್​ ನಿಲ್ದಾಣದ ಪಕ್ಕದಲ್ಲಿರುವ ಟಿಫನ್​ ಕೇಂದ್ರ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಆಮ್ಲೆಟ್​ ಹಾಕಲೆಂದು ಹೋಟೆಲ್​ ಮಾಲೀಕ ಮೊಟ್ಟೆಯನ್ನು ಹೊಡೆದಾಗ ಅದರ ಒಳಗೆ ಇನ್ನೊಂದು ಮೊಟ್ಟೆ ನೋಡಿ ಶಾಕ್​​ ಆಗಿದ್ದಾನೆ. ಮೊಟ್ಟೆಯ ಜತೆಗೆ ಹಳದಿ ಲೋಳೆ ಮತ್ತು ಬಿಳಿ ಲೋಳೆಯು ಸಹ ಇತ್ತು.

ಈ ವಿಸ್ಮಯವನ್ನು ನೋಡಿ ಹೋಟೆಲ್​ಗೆ ಬಂದಿದ್ದ ಗ್ರಾಹಕರು ಕೂಡ ಶಾಕ್​ ಆಗಿದ್ದಾರೆ. ಈ ವಿಚಾರ ತಿಳಿದ ಅನೇಕರು ಕೂಡ ವಿಚಿತ್ರ ಘಟನೆಯನ್ನು ನೋಡಲು ಹೋಟೆಲ್​ ಬಳಿ ಧಾವಿಸಿ ಬಂದರು. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದವರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net