ಸಿಸಿಟಿವಿ ರಿಪೇರಿ ಮಾಡುವವನನ್ನು ಮನೆಗೆ ಕರೆದ ದಂಪತಿಗೆ ಶಾಕ್​: ಏನಾಯ್ತು ಅಂತ ಕೇಳಿದ್ರೆ ಬೆಚ್ಚಿಬೀಳ್ತೀರಾ!

CCTV
Published on

ನವದೆಹಲಿ: ರಿಪೇರಿ ಮಾಡುವ ನೆಪದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದ್ದ ವಿಡಿಯೋ ತುಣಕನ್ನು ಎಗರಿಸಿರುವ ಸಿಸಿಟಿವಿ ಟೆಕ್ನಿಷಿಯನ್, ವಿಡಿಯೋಗಳನ್ನಿಟ್ಟುಕೊಂಡು ದಂಪತಿಯನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ​

ಕರಣ್​ ಅಹುಜಾ (30) ಎಂಬುವರು ದಕ್ಷಿಣ ದೆಹಲಿಯಲ್ಲಿ ವಾಸವಿದ್ದು, ಖಾಸಗಿ ಕಂಪನಿಯೊಂದರಲ್ಲಿ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದಾರೆ. ಅಹುಜಾ ಅವರ ಪತ್ನಿ ಎಂಎನ್​ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಓರ್ವ ಮಗುವಿದ್ದು, ಇಬ್ಬರು ಸಹ ಪೀತೃತ್ವ ಮತ್ತು ತಾಯ್ತನ ರಜೆಯನ್ನು ಮುಗಿಸಿಕೊಂಡು ಕರ್ತವ್ಯಕ್ಕೆ ಮರಳಿದ್ದಾರೆ. ಆದರೆ, ಮಗುವನ್ನು ನೋಡಿಕೊಳ್ಳಲು ಬೇಬಿಸಿಟ್ಟರ್​ ಒಬ್ಬರನ್ನು ನೇಮಿಸಿದ್ದಾರೆ.

ಅಲ್ಲದೆ, ಮಗುವಿನ ರಕ್ಷಣೆ ಬಗ್ಗೆ ಆಗಾಗಾ ನಿಗಾವಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಸುಮಾರು ಒಂದು ವರ್ಷಗಳ ಕಾಲ ಅಳವಡಿಸಲಾಗಿದ್ದ ಸಿಸಿಟಿವಿ ದುರಸ್ತಿಗೆ ಬಂದಿದ್ದರಿಂದ ಟೆಕ್ನಿಷಿಯನ್​ ಒಬ್ಬರಿಗೆ ಕರೆ ಮಾಡಿ ರಿಪೇರಿ ಮಾಡಲು ಬರಹೇಳುತ್ತಾರೆ. ಬಂದವನು ರಿಪೇರಿ ಮನೆಗೆ ತೆರಳುತ್ತಾನೆ.

ಇದರ ನಡುವೆ ಅಹುಜಾ ಅವರ ಮೊಬೈಲ್​ ವಾಟ್ಸ್​ಆ್ಯಪ್​ಗೆ ಅಪರಿಚಿತ ನಂಬರ್​ನಿಂದ ಕೆಲವು ವಿಡಿಯೋಗಳು ಬರುತ್ತವೆ. ಅದರಲ್ಲಿ ಅಹುಜಾ ತನ್ನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯಗಳು ಇರುತ್ತವೆ. ಅದನ್ನು ನೋಡಿ ದಂಪತಿಗೆ ಶಾಕ್​ ಆಗುತ್ತದೆ. ಇದಾದ ಕೆಲವೇ ಹೊತ್ತಲ್ಲಿ ಫೋನ್​ ರಿಂಗ್​ ಆಗುತ್ತದೆ.

ಫೋನ್​ನಲ್ಲಿ ಮಾತನಾಡುವ ವ್ಯಕ್ತಿ ನಾನು ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್​ ಮಾಡಬಾರದೆಂದರೆ, ಕೇಳಿದಷ್ಟು ಹಣ ಕೊಡು ಎಂದು ಬೇಡಿಕೆ ಇಡುತ್ತಾನೆ. ಹಣ ಕೊಟ್ಟರೆ ಎಲ್ಲವನ್ನು ಡಿಲೀಟ್​ ಮಾಡುತ್ತೇನೆ ಎನ್ನುತ್ತಾನೆ. ಅದರಂತೆ ಅಹುಜಾ ಆರೋಪಿ ಕಳುಹಿಸಿದ ನಂಬರ್​ಗೆ ಹಣವನ್ನು ವರ್ಗಾಯಿಸುತ್ತಾನೆ.

ಇದಾದ ಬಳಿಕ ವಿಡಿಯೋಗಳನ್ನು ಡಿಲೀಟ್​ ಮಾಡದ ಆರೋಪಿ ಮತ್ತೆ ಫೋನ್​ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾನೆ. ಅಹುಜಾ ಮತ್ತೆ ಹಣವನ್ನು ಕಳುಹಿಸುತ್ತಾರೆ. ಆದರೂ ಆರೋಪಿ ವಿಡಿಯೋಗಳನ್ನು ಡಿಲೀಟ್​ ಮಾಡುವುದಿಲ್ಲ. ಬದಲಾಗಿ ಮತ್ತೊಮ್ಮೆ ಹಣಕ್ಕಾಗಿ ಒತ್ತಾಯ ಮಾಡುತ್ತಾರೆ. ಮತ್ತು 3 ಲಕ್ಷ ರೂ. ಹಣ ಕಳುಹಿಸುವ ಅಹುಜಾ ಇದು ಇಲ್ಲಿಗೆ ಕೊನೆಯಾಗುವುದಿಲ್ಲ ಎಂದು ದೂರು ನೀಡುತ್ತಾರೆ.

ಸಿಕ್ಕಿಬಿದ್ದ ಆರೋಪಿ

ಆರೋಪಿ ರಶೀದ್​ ಉತ್ತರ ಪ್ರದೇಶದ ಅಜಾಮ್​ಗಢ ಮೂಲದವನು. ಈತ ದೆಹಲಿಯ ಸಿಸಿಟಿವಿ ಕ್ಯಾಮೆರಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸಿಸಿಟಿವಿ ಕ್ಯಾಮೆರಾ ಕೆಟ್ಟು ಹೋದ ಮನೆಗಳಲ್ಲಿ ಅದನ್ನು ರಿಪೇರಿ ಮಾಡುವುದೇ ಈತನ ಕೆಲಸ. ಹೀಗೆ ಅಹುಜಾ ಅವರ ಮನೆಯ ಕ್ಯಾಮೆರಾ ರಿಪೇರಿ ಮಾಡುವಾಗ ಯಾರಿಗೂ ಗೊತ್ತಾಗಂತೆ ಖಾಸಗಿ ವಿಡಿಯೋಗಳನ್ನು ಕಾಪಿ ಮಾಡಿಕೊಳ್ಳುತ್ತಾನೆ.

ವಿಡಿಯೋಗಳನ್ನು ಸೇವ್​ ಮಾಡಿಕೊಂಡು ಬೆಂಗಳೂರಿಗೆ ಬಂದು ವಿಡಿಯೋಗಳನ್ನು ಸಹುಜಾ ಮೊಬೈಲ್​ಗೆ ರಶೀದ್​ ಕಳುಹಿಸಿ, ಬೆದರಿಕೆ ಹಾಕಿರುತ್ತಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net