ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​

Doctor Couple Kill
Published on

ಭರತ್​ಪುರ್​: ಹಾಡಹಗಲಲ್ಲೇ ವಾಹನನಿಬಿಡ ರಸ್ತೆಯಲ್ಲಿ ಕಾರೊಂದನ್ನು ಅಡ್ಡಗಟ್ಟಿ ಅದರಲ್ಲಿ ವೈದ್ಯ ದಂಪತಿಯನ್ನು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್​ಪುರ್​ನಲ್ಲಿ ನಡೆದಿದೆ.

ಸ್ಥಳೀಯರನ್ನು ತೀವ್ರ ಆತಂಕಕ್ಕೆ ದೂಡಿರುವ ಈ ಘಟನೆ ಶುಕ್ರವಾರ ಸಂಜೆ 4.45ರ ಸುಮಾರಿಗೆ ನಡೆದಿದೆ. ವೈದ್ಯ ದಂಪತಿ ತೆರಳುತ್ತಿದ್ದ ಕಾರನ್ನು ಓವರ್​ಟೇಕ್​ ಮಾಡಿ ಅಡ್ಡಗಟ್ಟಿ ಕೊಲೆ ಮಾಡಿ ಪರಾರಿ ಆಗಿದ್ದಾರೆ.

ಕಾರನ್ನು ಅಡ್ಡಗಟ್ಟಿದ ಬಳಿಕ ದುಷ್ಕರ್ಮಿಗಳಿಬ್ಬರು ಕಾರಿನತ್ತ ನಡೆದಿದ್ದಾರೆ. ಅದನ್ನು ನೋಡಿದ ವೈದ್ಯ ಏನೆಂದು ತಿಳಿದುಕೊಳ್ಳಲು ಕಿಟಕಿ ಗ್ಲಾಸ್​ ಅನ್ನು ಕೆಳಗೆ ಇಳಿಸುತ್ತಿದ್ದಂತೆ ಓರ್ವ ಗುಂಡಿನ ಮಳೆಗರೆದಿದ್ದಾನೆ. ಇದಾದ ಬಳಿಕ ಇಬ್ಬರು ಅಲ್ಲಿಂದ ಬೈಕ್​ನಲ್ಲಿ ಪರಾರಿಯಾಗಿದ್ದಾರೆ.

ಈ ಭಯಾನಕ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮೇಲ್ನೋಟಕ್ಕೆ ಕೊಲೆಯ ಹಿಂದೆ ಸೇಡಿನ ಕಾರಣ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ವೈದ್ಯ ದಂಪತಿ ಯುವತಿಯೊಬ್ಬಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಯುವತಿ ವೈದ್ಯರೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ವೈದ್ಯ ದಂಪತಿಗೆ ಗುಂಡಿನ ದಾಳಿ ಮಾಡಿರುವ ವ್ಯಕ್ತಿಯನ್ನು ಕೊಲೆಯಾದ ಯುವತಿಯ ಸಹೋದರ ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ಯುವತಿಯ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ವೈದ್ಯನ ಪತ್ನಿ ಮತ್ತು ತಾಯಿಯೇ ಆರೋಪಿಗಳಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net