ರಾಕೆಟ್​ ವೇಗದಲ್ಲಿ ಬಂದು ಆಟೋಗೆ ಗುದ್ದಿದ ಆಡಿ ಕಾರು: ವಿಡಿಯೋ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ!

Accident
Published on

ಹೈದರಾಬಾದ್​: ರಾಕೆಟ್​ ವೇಗದಲ್ಲಿ ಬಂದ ಆಡಿ ಕಾರೊಂದು ಆಟೋಗೆ ಗುದ್ದಿದ ಪರಿಣಾಮ ರಸ್ತೆಯಲ್ಲೇ ನಾಲ್ಕರಿಂದ ಐದು ಸುತ್ತು ಗಿರಕಿ ಹೊಡೆದ ಆಟೋ ಕೆಳಗೆ ಉರುಳಿ ಪ್ರಯಾಣಿಕನೊರ್ವ ಮೃತಪಟ್ಟಿರುವ ಘಟನೆ ಹೈದರಾಬಾದ್​​ನ ಸೈಬರಾಬಾದ್ ಏರಿಯಾದಲ್ಲಿರುವ ಇನೊರ್ಬಿಟ್​ ಮಾಲ್​ ಬಳಿ ಸೋಮವಾರ ಮುಂಜಾನೆ ನಡೆದಿದೆ.​

ಆಡಿ ಕಾರಿನಲ್ಲಿದ್ದ ಆರೋಪಿಯು ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದಿದ್ದ ಎಂದು ತಿಳಿದುಬಂದಿದೆ. ಪಾರ್ಟಿ ಮುಗಿಸಿಕೊಂಡು ಜುಬಿಲಿ ಹಿಲ್ಸ್​ ಕಡೆಗೆ ಬರುವಾಗ ರಾಕೆಟ್​ ವೇಗದಲ್ಲಿ ಆಟೋಗೆ ಗುದ್ದಿದ್ದಾನೆಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಆಡಿ ಚಾಲಕ ಸುಜಿತ್ ಮತ್ತು ಆತನ ಸ್ನೇಹಿತ ಆಶಿಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ, ಆಡಿ ಚಾಲಕ ಮತ್ತು ಅವನ ಸ್ನೇಹಿತ ಸ್ಥಳದಿಂದ ಓಡಿಹೋಗಿದ್ದರು.

ಘಟನೆ ನಡೆದ ಬೆನ್ನಲ್ಲೇ ಹತ್ತಿರದಲ್ಲಿದ್ದ ಪೊಲೀಸರು ಆಟೋರಿಕ್ಷಾ ಚಾಲಕ ಮತ್ತು ಆತನ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆಟೋ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net